×
Ad

ಮೆಡಿಟರೇನಿಯನ್‌ನಲ್ಲಿ ಮೃತರ ಸಂಖ್ಯೆ 365ಕ್ಕೆ ಏರಿಕೆ

Update: 2016-11-19 00:03 IST

ಜಿನೇವ, ನ. 18: ಇತ್ತೀಚಿನ ದಿನಗಳಲ್ಲಿ ಮೆಡಿಟರೇನಿಯನ್ ಸಮುದ್ರದಲ್ಲಿ ವಲಸಿಗರ ದೊ ೀಣಿ ಮುಳುಗಿದ ಪ್ರಕರಣಗಳಲ್ಲಿ 365 ಮಂದಿ ಮೃತಪಟ್ಟಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ ಎಂದು ತಾನು ಭಾವಿಸುವುದಾಗಿ ವಿಶ್ವಸಂಸ್ಥೆಯ ವಲಸಿಗರ ಉಸ್ತುವಾರಿ ನೋಡಿಕೊಳ್ಳುವ ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ ಹೇಳಿದೆ.

ಈ ವರ್ಷ ಮೆಡಿಟರೇನಿಯನ್ ಸಮುದ್ರದಲ್ಲಿ 4,636 ಮಂದಿ ಮೃತಪಟ್ಟಿದ್ದಾರೆ ಎಂದು ಸಂಘಟನೆಯ ವಕ್ತಾರ ಲಿಯೊನಾರ್ಡ್ ಡಾಯ್ಲಾ ಹೇಳಿದರು.

ಕಳೆದ ವರ್ಷದ ನವೆಂಬರ್‌ಗೆ ಹೋಲಿಸಿದರೆ ಈ ವರ್ಷದ ನವೆಂಬರ್‌ನಲ್ಲಿ ಮೃತಪಟ್ಟವರ ಸಂಖ್ಯೆಯಲ್ಲಿ ಆರು ಪಟ್ಟು ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News