×
Ad

ಅಮಾನ್ಯ ನೋಟುಗಳಿಗೆ ಕಮಿಷನ್ ಆಧಾರದಲ್ಲಿ ಹೊಸ ನೋಟು ನೀಡುತ್ತಿದ್ದ ಐವರ ಸೆರೆ

Update: 2016-11-19 10:53 IST

ಕಾಸರಗೋಡು, ನ.19: ಅಮಾನ್ಯಗೊಂಡ 500, 1000 ಸಾವಿರ ರೂ. ಮುಖಬೆಲೆಯ ನೋಟುಗಳ ಬದಲಿಗೆ ಕಮಿಷನ್ ಆಧಾರದಲ್ಲಿ ಹೊಸ ನೋಟುಗಳನ್ನು ನೀಡುತ್ತಿದ್ದ ತಂಡವನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
 ನೀಲೇಶ್ವರ ನಡುಕಂಡದ ಪಿ.ಹಾರಿಸ್(39), ಪಿ.ನಿಸಾರ್(42), ಆತನ ಸಹೋದರ ಎಂ.ನೌಶಾದ್(39), ಸಿ.ಎಚ್.ಸಿದ್ದೀಕ್(39) ಮತ್ತು ಪಾಲಕುನ್ನುವಿನ ಮುಹಮ್ಮದ್ ಶಫೀಕ್(30) ಬಂಧಿತ ಆರೋಪಿಗಳಾಗಿದ್ದಾರೆ. ಇವರಿಗೆ ನೋಟುಗಳನ್ನು ನೀಡಿದನೆನ್ನಲಾದ ಕಾಞಂಗಾಡ್‌ನ ವ್ಯಾಪಾರಿಯೋರ್ವನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಸಂಚರಿಸುತ್ತಿದ್ದ ಕಾರಿನಿಂದ 6 ಲಕ್ಷ ರೂ. ನಗದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
  ಈ ತಂಡವು ಹತ್ತು ಲಕ್ಷ ರೂ. ಹಳೆ ನೋಟುಗಳಿಗೆ ಏಳು ಲಕ್ಷ ರೂ. ನೀಡುತ್ತಿತ್ತೆನ್ನಲಾಗಿದೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಮಫ್ತಿಯಲ್ಲಿ ಬಂದ ಪೊಲೀಸರು ನೋಟು ಬದಲಾಯಿಸಲಿದೆ ಎಂದು ತಂಡವನ್ನು ನಂಬಿಸಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಬ್ಯಾಂಕ್‌ನಿಂದ ಹಳೆ ನೋಟು ಬದಲಾವಣೆಗೆ ಓರ್ವನಿಗೆ ಎರಡು ಸಾವಿರ ರೂ. ಮಾತ್ರ ಬದಲಾಯಿಸಲು ಸಾಧ್ಯವಾಗುತ್ತಿರುವ ಪ್ರಸಕ್ತ ದಿನಗಳಲ್ಲಿ ಇಷ್ಟೊಂದು ಪ್ರಮಾಣದ ನೋಟುಗಳು ಇವರ ಕೈಗೆ ಹೇಗೆ ಸೇರಿತೆಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
  ಪ್ರಕರಣದಲ್ಲಿ ಬ್ಯಾಂಕ್ ಸಿಬ್ಬಂದಿಯ ಕೈವಾಡ ಇದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News