×
Ad

ಪ್ರತ್ಯೇಕವಾಗಿ ಇಂದಿರಾ ಗಾಂಧಿ ಜಯಂತಿ ಆಚರಿಸಿದ ಜನಾರ್ದನ ಪೂಜಾರಿ

Update: 2016-11-19 13:14 IST

ಮಂಗಳೂರು, ನ.19: ದಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ಶತಾಬ್ದಿಯನ್ನು ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ವಿಶಿಷ್ಟವಾಗಿ ಆಚರಿಸಿದರು.
ಅವರು ಜೆಪ್ಪು ಸೆಮಿನರಿಯ ಪ್ರಶಾಂತಿ ನಿಲಯದ ಆಶ್ರಮವಾಸಿಗಳಿಗೆ, ಜೆಪ್ಪು ಸಂತ ಅಂತೋನಿಯವರ ಆಶ್ರಮ, ಕೊಣಾಜೆಯ ಅಭಯಾಶ್ರಮ ಹಾಗೂ ಕುಲಶೇಖರದ ಸಾನಿಧ್ಯ ವಿಶಿಷ್ಟ ಮಕ್ಕಳ ಕೇಂದ್ರದಲ್ಲಿ ಹಣ್ಣು ಹಂಪಲುಗಳನ್ನು ವಿತರಿಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಪೂಜಾರಿ, ಇಂದಿರಾ ಗಾಂಧಿ ಬಡವರ ಪರ ಕಾಳಜಿ ಇದ್ದ ಹಿರಿಯ ನಾಯಕಿ. ಅವರು ಬಡವರ ಸೇವೆಗಾಗಿ ನನ್ನನ್ನು ಸಚಿವರನ್ನಾಗಿ ಮಾಡಿದರು.ಬಡವರಿಗೆ ಸಾಲ ನೀಡುವ ಮೂಲಕ ಅವರಿಗೆ ನೆರವಾಗಲು ನನ್ನಿಂದ ಸಾಧ್ಯವಾಗಿದೆ ಎಂದರು.
 
     ಪ್ರತಿ ತಿಂಗಳು ನನಗೆ ಬರುವ ಸಂಬಳದಿಂದ ಆಶ್ರಮವಾಸಿಗಳಿಗೆ ಕೊಡುಗೆ ನೀಡುತ್ತಿದ್ದೇನೆ ಎಂದವರು ತಿಳಿಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ, ಶಾಸಕ ಜೆ.ಆರ್.ಲೋಬೊ, ಮಾಜಿ ಶಾಸಕ ವಿಜಯಕುಮಾರ್, ಕಳ್ಳಿಗೆ ತಾರಾನಾಥ ಶೆಟ್ಟಿ, ಅರುಣ್ ಕುವೆಲ್ಲೊ, ಟಿ.ಕೆ.ಸುಧೀರ್, ಮನಪಾ ಸದಸ್ಯ ನಾಗವೇಣಿ, ಅಪ್ಪಿ, ಸಬಿತಾ ಮಿಸ್ಕಿತ್, ಆಶಾ ಡಿಸಿಲ್ವ, ರಾಧಾಕೃಷ್ಣ, ಎ.ಸಿ.ವಿನಯರಾಜ್ ಹಾಗೂ ಇತರ ಪದಾಧಿಕಾರಿಗಳಾದ ಕಮಲಾಕ್ಷ, ಜಯಕರ ಸಮರ್ಥ, ಹಮೀದ್ ಕಣ್ಣೂರು, ಸಲೀಂ ಕುದ್ರೋಳಿ, ಕರುಣಾಕರ ಶೆಟ್ಟಿ ಮತ್ತು ಆಶ್ರಮದ ಸಿಸ್ಟರ್ ಸಿಲ್ವಿಯಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News