"ಸತ್ತಮೇಲೆ ನನ್ನನ್ನು ಹೂಳಬೇಡಿ,ನನಗೆ ಪುನಃ ಬದುಕಬೇಕಿದೆ"
ಲಂಡನ್,ನ. 19: ’ನನ್ನನ್ನು ಫ್ರೀಝರ್‌ನಲ್ಲಿ ಇಟ್ಟರೆ ಸಾಕು. ನನ್ನನ್ನು ಹೂಳಬೇಡಿ’ ಹದಿನಾಲ್ಕುವರ್ಷದ ಬಾಲಕಿಯ ಈ ಆಗ್ರಹಕ್ಕೆ ಲಂಡನ್ ಹೈಕೋರ್ಟು ಜಡ್ಜ್ ಪೀಟರ್ ಜಾಕ್ಸನ್ ಅನುಮತಿ ನೀಡಿದ್ದಾರೆಂದು ವರದಿಯಾಗಿದೆ. ಕ್ಯಾನ್ಸರ್ ಪೀಡಿತ ಬಾಲಕಿ ಸಾವಿಗೆ ನಿಕಟವಾದಾಗ ಜಡ್ಜ್‌ಗೆ ಈ ರೀತಿ ಪತ್ರ ಬರೆದಿದ್ದಳು. ’ನನಗೆ ಇನ್ನೂ ಕೆಲವು ವರ್ಷ ಬದುಕುವ ಆಶೆ ಇದೆ. ಭವಿಷ್ಯದಲ್ಲಿ ಕ್ಯಾನ್ಸರ್ ಸಂಪೂರ್ಣ ಇಲ್ಲವಾಗಿಸುವ ಸಂಶೋಧನೆಗಳು ಬರಬಹುದು. ಆಗ ಪುನಃ ನನಗೆ ಬದುಕಬೇಕಿದೆ.ನಾನು ಮೃತಳಾದರೆ ನನ್ನ ಮೃತದೇಹವನ್ನು ಫ್ರೀಝರ್‌ನಲ್ಲಿರಿಸಬೇಕು. ನೂರು ವರ್ಷಗಳ ಬಳಿಕವಾದರೂ ಈ ರೋಗವನ್ನು ಜಗತ್ತು ಸೋಲಿಸುವಾಗ ನನಗೆ ಪುನಃ ಎದ್ದೇಳಬೇಕು’ ಎಂದು ಬಾಲಕಿ ಪತ್ರದಲ್ಲಿ ಜಡ್ಜ್‌ನ್ನು ವಿನಂತಿಸಿಕೊಂಡಿದ್ದಾಳೆ.
ಆದರೆ ತಂದೆ ತಾಯಿಯರು ಮೊದಲು ಇದಕ್ಕೆ ಒಪ್ಪಲಿಲ್ಲ. ನಂತರ ಬಾಲಕಿಯ ಮನವಿಗೆ ಒಪ್ಪಿಕೊಂಡಿದ್ದಾರೆ. ಬಾಲಕಿ ಮರಣಾಸನ್ನ ಕಾಲದಲ್ಲಿ ಬಾಲಕಿ ಇಂಟರ್‌ನೆಟ್‌ನಲ್ಲಿ ಕ್ರಯೊಜನಿಕ್ ಪ್ರಿನಸವೇಶನ್ ಸಾಧ್ಯತೆಗಳ ಕುರಿತು ಆಯ್ಕೆ ಮಾಡಿ ಅಭ್ಯಸಿಸಿದ್ದಳು. ಹೊಸ ಸಂಶೋಧನೆಗಳು ಕಂಡುಹಿಡಿದಾಗ ಮತ್ತೆ ಜೀವಿಸಲು ಸಾಧ್ಯವಿದೆ ಎಂದು ಅವಳಲ್ಲಿ ನಿರೀಕ್ಷೆಯಿತ್ತು. ಆದ್ದರಿಂದ ಈ ಸಾಧ್ಯತೆಯನ್ನು ಬಳಸಿಕೊಳ್ಳಬೇಕೆಂದು ಸಾಯುವ ಮೊದಲು ಈ ರೀತಿ ಪತ್ರವನ್ನು ಬರೆದಿದ್ದಾಳೆಂದು ವರದಿ ತಿಳಿಸಿದೆ.