ಏಕಾಂತದಿಂದ ಕವಿತೆಯ ಹುಟ್ಟು : ಸತ್ಯನಾರಾಯಣರಾವ್ ಅಣತಿ

Update: 2016-11-19 12:13 GMT

ಮೂಡುಬಿದಿರೆ, ನ.19: ಕವಿತೆ, ಸೃಜನಶೀಲತೆ ಹಾಗೂ ವೈಯಕ್ತಿಕ ಕ್ರಿಯೆ ಏಕಾಂತದಲ್ಲಿ ನಡೆಯುವಂತದ್ದು. ಸಂಸ್ಕೃತಿ, ಧಾರ್ಮಿಕ, ರಾಜಕೀಯ ಮತ್ತು ನಮ್ಮ ಬಂಧುಗಳು ನಮ್ಮನ್ನು ಬಂಧಿಸಿಟ್ಟಿದ್ದರು. ಇದರಿಂದ ಬಿಡುಗಡೆಗೊಂಡು ಏಕಾಂತಕ್ಕೆ ದಾಟಲು ಅವಕಾಶ ಸಿಕ್ಕಿದಾಗ ತನ್ನಲ್ಲಿ ಕವಿತೆಗಳು ಒದಗಿ ಬಂತು ಎಂದು ಸತ್ಯನಾರಾಯಣರಾವ್ ಅಣತಿ ಹೇಳಿದರು.

ಅವರು ‘ಕವಿ ಸಮಯ ಕವಿ ನಮನ’ದಲ್ಲಿ ತನ್ನ ವಲಸೆ ಬರುವ ಹಕ್ಕಿಗಳು ಎಂಬ ಕವಿತೆಯನ್ನು ವಾಚಿಸಿ ಮಾತನಾಡಿದರು.

ಏಕಾಂತವಾದಾಗ ಯಕ್ಷಗಾನ, ಪ್ರಕೃತಿಯ ಸೌಂದರ್ಯ, ಪಕ್ಷಿಗಳ ನೋಟ, ಸುಂದರವಾದ ಹೆಣ್ಣು ಮಕ್ಕಳ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಯಿತು. ಅಲ್ಲದೆ ಇವುಗಳಿಗೆ ತಕ್ಕಂತೆ ತನ್ನ ಕವಿತೆಗಳು ಆವರಿಸಿ ಲೋಕಮುಖವಾಗಿ ಜನಮುಖವಾಗಿ ಆಲೋಚಿಸತೊಡಗಿತು ಆಗ ಕವಿತೆ ಆಯಾಮಗಳನ್ನು ಪಡೆದು ಬೆಳಕಿಗೆ ಬಂತು. ಸಾಂಸ್ಕೃತಿಕವಾದ ಬಿಕ್ಕಟ್ಟಿನಲ್ಲಿ ಮನುಷ್ಯರ ಮನಸ್ಸು ಇರುತ್ತದೆ. ಈ ಬಿಕ್ಕಟ್ಟನ್ನು ನಿವಾರಿಸಲು ಬೋಧಿ ಜ್ಞಾನ ನಮ್ಮೆಲ್ಲರ ಮನಸ್ಸಿಗೆ ಬಂದು ಬಹುಮತದ ಕಡೆಗೆ ಹೊರಳಲಿ. ಆಗ ದೇಶ ಈ ಜ್ಞಾನದ ಬೆಳಕಿನಲ್ಲಿ ಹೊಸ ಹಾಗೂ ನಾಳೆಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.

ಅವರ ‘ವಲಸೆ ಬರುವ ಹಕ್ಕಿಗಳು ನೆಲೆಸ ಬರುವುದಲ್ಲ’ ಎಂಬ ಕವಿತೆಗೆ ಎಂಎಸ್ ಗಿರಿಧರ್ ರಾಗ ಸಂಯೋಜನೆ ಮಾಡಿದರು. ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದ ಎರಡನೆ ದಿನವಾದ ಶನಿವಾರ ಮೊದಲ ಕಾರ್ಯಕ್ರಮವಾಗಿಪುತ್ತೂರು ಪಾಂಡುರಂಗ ನಾಯಕ್ ಮತ್ತು ತಂಡದವರು ದಾಸ ಸಂಗೀತವನ್ನು ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News