×
Ad

ನ.22: ನಿವೃತ್ತ ಬ್ಯಾಂಕ್ ನೌಕರರ ಧರಣಿ

Update: 2016-11-19 23:50 IST

ಉಡುಪಿ, ನ.19: ಉಡುಪಿ ಜಿಲ್ಲಾ ನಿವೃತ್ತ ಬ್ಯಾಂಕ್ ನೌಕರರ ಸಂಘದ ಆಶ್ರಯದಲ್ಲಿ ವಿವಿಧ ಬ್ಯಾಂಕ್‌ಗಳ ನಿವೃತ್ತ ನೌಕರರು ನ.22ರಂದು ಬೆಳಗ್ಗೆ 10ಕ್ಕೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಧರಣಿ ಹಾಗೂ ಮತಪ್ರದರ್ಶನ ನಡೆಸಲಿದ್ದಾರೆ.

 ನಿವೃತ್ತ ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳಾದ ಕಾಲ ಕಾಲಕ್ಕೆ ಪಿಂಚಣಿ ಪರಿಷ್ಕರಣೆ, ಕುಟುಂಬ ಪಿಂಚಣಿಯಲ್ಲಿ ಹೆಚ್ಚಳ, 2002 ನವೆಂಬರ್ ಮೊದಲು ನಿವೃತ್ತರಾದವರಿಗೆ ಶೇ.100ರಷ್ಟು ತುಟ್ಟಿಭತ್ತೆ ನಿಶಸ್ತ್ರೀಕರಣ ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಧರಣಿ ನಡೆಸಲು ಸಂಘವು ನಿರ್ಧರಿಸಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News