ಸತತ 3ನೆ ಬಾರಿಗೆ ಅಮಿ ಬೇರಾ ಅಮೆರಿಕ ಕಾಂಗ್ರೆಸ್‌ಗೆ ಆಯ್ಕೆ
Update: 2016-11-20 00:07 IST
ವಾಶಿಂಗ್ಟನ್, ನ. 19: ಭಾರತ ಮೂಲದ ಅಮಿ ಬೇರಾ ಸತತ ಮೂರನೆ ಅವಧಿಗೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಕಾಂಗ್ರೆಸ್‌ಗೆ ಆಯ್ಕೆಯಾದ ಭಾರತೀಯ ಅಮೆರಿಕನ್ನರ ಸಂಖ್ಯೆ ದಾಖಲೆಯ ಐದಕ್ಕೇರಿದೆ.
ಅಮೆರಿಕ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಈಗಾಗಲೇ ಮೂವರು ಭಾರತೀಯ ಅಮೆರಿಕನ್ನರು ಪ್ರಥಮ ಅವಧಿಗೆ ಆಯ್ಕೆಯಾಗಿದ್ದಾರೆ. ಅವರೆಂದರೆ ಇಲಿನಾಯಿಸ್‌ನ ರಾಜಾ ಕೃಷ್ಣಮೂರ್ತಿ, ವಾಶಿಂಗ್ಟನ್ ರಾಜ್ಯದ ಪ್ರಮೀಳಾ ಜಯಪಾಲ್ ಮತ್ತು ಕ್ಯಾಲಿಫೋರ್ನಿಯದ ರೋ ಖನ್ನಾ.
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ನಾಲ್ವರು ಭಾರತೀಯ ಅಮೆರಿಕನ್ ಸಂಸದರು ಇರುವುದು ಇದು ಮೊದಲ ಬಾರಿಯಾಗಿದೆ.
ಇನ್ನೋರ್ವ ಭಾರತೀಯ ಅಮೆರಿಕನ್ ಕಮಲಾ ಹ್ಯಾರಿಸ್ ಅಮೆರಿಕದ ಸೆನೆಟ್‌ಗೆ ಆಯ್ಕೆಯಾಗಿದ್ದಾರೆ.
51 ವರ್ಷದ ಡೆಮಾಕ್ರಟಿಕ್ ಅಭ್ಯರ್ಥಿ ಬೇರಾ ತನ್ನ ಎದುರಾಳಿ ರಿಪಬ್ಲಿಕನ್ ಪಕ್ಷದ ಸ್ಕಾಟ್ ಜೋನ್ಸ್‌ರನ್ನು ಸೋಲಿಸಿದರು.