ಲೈಂಗಿಕ ಕಿರುಕುಳ: ಆರೋಪಿಯ ಸೆರೆ
Update: 2016-11-20 00:07 IST
ಪುತ್ತೂರು, ನ.19: ಅಪ್ರಾಪ್ತ ವಯಸ್ಸಿನ ಶಾಲಾ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನ ನಡೆಸಿದ ಪ್ರಕರಣ ಶುಕ್ರವಾರ ರಾತ್ರಿ ನಡೆದಿದೆ. ಆರೋಪಿಯ ವಿರುದ್ಧ ಪೊಕ್ಸೊ ಕಾಯ್ದೆಯಡಿ ಕೇಸು ದಾಖಲಾಗಿದೆ. ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಅದ್ರಾಮ(55) ಬಂಧಿತ ಆರೋಪಿ. ಆರೋಪಿಯು ಕರಿತಿಂಡಿಯ ತಳ್ಳುಗಾಡಿಯನ್ನು ಹೊಂದಿದ್ದು, ಶುಕ್ರವಾರ ರಾತ್ರಿ 9 ವರ್ಷದ ಬಾಲಕಿಯನ್ನು ತಿಂಡಿಕೊಡುವ ನೆಪದಲ್ಲಿ ಮನೆಗೆ ಕರೆಸಿಕೊಂಡು ಅತ್ಯಾಚಾರ ನಡೆಸಲು ಯತ್ನಿಸಿದ್ದ ಎನ್ನಲಾಗಿದೆ. ಈ ಸಂದರ್ಭ ಬಾಲಕಿ ಬೊಬ್ಬೆ ಹಾಕಿದ್ದು, ತಕ್ಷಣ ಸ್ಥಳೀಯರು ಆಗಮಿಸಿ ಆರೋಪಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದರು. ಠಾಣೆಯಲ್ಲಿ ಆರೋಪಿಗೆ ಎದೆನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ನಗರ ಪೊಲೀಸರು ಆರೋಪಿಯ ವಿರುದ್ದ ಪೊಕ್ಸೊ ಕಾಯ್ದೆಯಡಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.