ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ
Update: 2016-11-20 00:10 IST
ಮಂಜೇಶ್ವರ, ನ.19: ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೋರ್ವರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮಂಜೇಶ್ವರ ಶ್ರೀಮದ್ ಅನಂತೇಶ್ವರ ಕ್ಷೇತ್ರ ಬಳಿಯ ನಿವಾಸಿ ಚಂದ್ರಕಾಂತ ನಾಯಕ್(64) ಮೃತ ವ್ಯಕ್ತಿ. ಇವರು ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದು, ಪಕ್ಕದ ಮನೆಯವರು ನೀಡಿದ ಆಹಾರ ಸೇವಿಸುತ್ತಿದ್ದರು ಎನ್ನಲಾಗಿದೆ. ಆದರೆ ಶುಕ್ರವಾರ ಬೆಳಗ್ಗೆ ಅವರು ಆಹಾರ ಸೇವಿಸಲು ಬರದಿರುವುದರಿಂದ ಅಲ್ಲಿಗೆ ತೆರಳಿ ನೋಡಿದಾಗ ಮನೆಯ ಮೇಲಂತಸ್ತಿನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಚಂದ್ರಕಾಂತ ನಾಯಕ್ ಪತ್ತೆಯಾಗಿದ್ದಾರೆ.
ಚಂದ್ರಕಾಂತ ನಾಯಕ್‌ರ ಪತ್ನಿ ಹಾಗೂ ಪುತ್ರ ಈ ಹಿಂದೆಯೆ ಮೃತರಾಗಿದ್ದು, ಸೊಸೆ ಬೆಂಗಳೂರಿನಲ್ಲಿದ್ದಾರೆಂದು ತಿಳಿದು ಬಂದಿದೆ. ಆದುದರಿಂದ ಇವರು ಏಕಾಂಗಿಯಾಗಿ ವಾಸಿಸುತ್ತಿದ್ದರು. ಈ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.