ಹಿಕ್ಮಾ ಇಂಟರ್‌ನ್ಯಾಶನಲ್ ಅಕಾಡಮಿಯಲ್ಲಿ ಫೈರ್ ಆ್ಯಂಡ್ ಸೇಫ್ಟಿ ಪ್ರಾತ್ಯಕ್ಷಿಕ ಶಿಬಿರ
ಮಂಗಳೂರು, ನ.20: ನಗರದ ಹಿಕ್ಮಾ ಇಂಟರ್‌ನ್ಯಾಶನಲ್ ಅಕಾಡಮಿಯಲ್ಲಿ ಫೈರ್ ಆ್ಯಂಡ್ ಸೇಫ್ಟಿ ಕುರಿತು ಜಾಗೃತಿ ಶಿಬಿರ ನಡೆಯಿತು.
ಸಂಸ್ಥೆಯ ವಿದ್ಯಾರ್ಥಿಗಳ ಪೋಷಕರಿಗೆ, ಸಿಬ್ಬಂದಿಗಾಗಿ ಆಯೋಜಿಸಲಾಗಿದ್ದ ಶಿಬಿರದಲ್ಲಿ ಭಾಗವಹಿಸಿದ್ದ ಅಗ್ನಿಶಾಮಕ ದಳದ ಅಧಿಕಾರಿಗಳು ಅಗ್ನಿ ಅವಘಡಗಳು ಮತ್ತು ಸುರಕ್ಷತೆ ಕುರಿತು ಮಾಹಿತಿ ನೀಡಿದರು. ಅಗ್ನಿ ದುರಂತ ಸಂಭವಿಸಿದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವರಿಸಿದರು.
ಹಿಕ್ಮಾ ಇಂಟರ್‌ನ್ಯಾಶಲನ್ ಅಕಾಡಮಿಯ ಸಿಇಒ ಸೈಫ್ ಸುಲ್ತಾನ್ ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ನಿಸಾರ್ ಅತಿಥಿಗಳಿಗೆ ಹೂಗುಚ್ಛ ನೀಡಿದರು. ಪ್ರಧಾನ ಕಾರ್ಯದರ್ಶಿ ಫಾರೂಕ್ ಎಸ್.ಎಂ. ‘ಹಿಕ್ಮಾ’ ಶಿಕ್ಷಣ ಸಂಸ್ಥೆಯ ವತಿಯಿಂದ ಪ್ರವಾದಿ ಮುಹಮ್ಮದ್(ಸ.) ಕುರಿತ ಪುಸ್ತಕವನ್ನು ಅಗ್ನಿಶಾಮಕ ದಳದ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಸಭಾ ಕಾರ್ಯಕ್ರಮದ ಬಳಿಕ ಫೈರ್ ಆ್ಯಂಡ್ ಸೇಫ್ಟಿ ಕುರಿತು ಮೈದಾನದಲ್ಲಿ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.