×
Ad

ಪೋಷಕರಿಂದ ಮಕ್ಕಳ ಸೃಜನಶೀಲತೆ ಕುಂಠಿತ: ಮಂಜುಳಾ

Update: 2016-11-20 17:22 IST

ಉಡುಪಿ, ನ.20: ಇಂದು ನಾವೆಲ್ಲರೂ ಮಕ್ಕಳ ಬಾಲ್ಯವನ್ನು ಕಸಿಯುತ್ತಿ ದ್ದೇವೆ. ಅವರನ್ನು ಮಕ್ಕಳಾಗಳು ಬಿಡುತ್ತಿಲ್ಲ. ದೊಡ್ಡವರ ಹಾಗೆ ಮಕ್ಕಳನ್ನು ನಡೆಸಿಕೊಳ್ಳುತ್ತಿದ್ದೆವೆ. ಅವರು ಆದಷ್ಟು ಬೇಗ ದೊಡ್ಡವರಾಗಬೇಕು ಎಂಬುದು ಹೆತ್ತವರ ಆಸೆ. ಇದರಿಂದ ಮಕ್ಕಳ ಸೃಜನಶೀಲತೆ ಕುಂಠಿತವಾಗುತ್ತದೆ. ಹಾಗಾಗಿ ಮಕ್ಕಳನ್ನು ಮಕ್ಕಳ ಹಾಗೆ ನೋಡಿ ನಡೆಸಿಕೊಳ್ಳಬೇಕು ಎಂದು ಭರತ ನಾಟ್ಯ ತಜ್ಞೆ, ರಂಗಕರ್ಮಿ ಮಂಜುಳ ಸುಬ್ರಹ್ಮಣ್ಯ ಹೇಳಿದ್ದಾರೆ.

ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಜವಾಹರ್ ಲಾಲ್ ನೆಹರು ಜನ್ಮದಿನದ ಪ್ರಯುಕ್ತ ಮಕ್ಕಳ ದಿನಾಚರಣೆಯ ಅಂಗವಾಗಿ ಉದ್ಯಾವರ ಬಿಲ್ಲವ ಮಹಾಜನ ಸಂಘದ ವಿಠೋಬ ರುಖುಮಾಯಿ ನಾರಾಯಣಗುರು ಮಂದಿರದಲ್ಲಿ ಜರಗಿದ ಏಳನೇ ವರ್ಷದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪೌಢ ಶಾಲಾ ವಿದ್ಯಾಥಿಗಳ ಯುಎಫ್‌ಸಿ ಮಕ್ಕಳ ಹಬ್ಬದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಒಳ್ಳೆಯ ಸಂಸ್ಕಾರ ಎನ್ನೋದು ಹೇರಿಕೆ ಅಥವಾ ಕಲಿಕೆ ಯಿಂದ ಬರೂದಿಲ್ಲ ಅದು ಅಂತರಂಗದೊಳಗೆ ಹುಟ್ಟ ಬೇಕು. ನೃತ್ಯ ಸಂಗೀತ, ನಾಟಕ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿ ಕೊಂಡಾಗ ಒಳ್ಳೆಯ ಸಂಸ್ಕಾರ ಅವರಲ್ಲಿ ಮೂಡಿಬರುತ್ತದೆ. ನೃತ್ಯ ಮನಸ್ಸನ್ನು ಕೆರಳಿಸ ಬಾರದು, ಅರಳಿಸ ಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾಂಗ ಉಪನಿರ್ದೇಶಕ ದಿವಾಕರ ಶೆಟ್ಟಿ ಮಾತನಾಡಿ, ಇಂದು ಮಕ್ಕಳಿಗೆ ಬಾಲ್ಯವೇ ಇರಬಾರದು ಎಂಬುದಾಗಿ ಹೆತ್ತವರು ನಿರ್ಧರಿಸಿದ್ದಾರೆ. ಮಗು ಹುಟ್ಟಿದ ಕೂಡಲೇ ಶಾಲೆಗೆ ದಾಖಲಿಸಲು ಸಿದ್ದರಿದ್ದಾರೆ. ಮಕ್ಕಳ ಬಾಲ್ಯವನ್ನು ಆರೋಗ್ಯದ ನೆಪದಲ್ಲಿ ನಿರಾಕರಿಸಲಾಗು ತ್ತಿದೆ. ಕೆಲವು ಟಿವಿ ರಿಯಾಲಿಟಿ ಶೋಗಳಂತೂ ಮಕ್ಕಳ ಬಾಲ್ಯವನ್ನು ಕೊಲೆ ಮಾಡುತ್ತಿವೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಾವರ ಗ್ರಾಪಂ ಅಭಿವೃದ್ದಿ ಅಧಿಕಾರಿ ರಮಾನಂದ ಪುರಾ ಣಿಕ್, ಉಡುಪಿ -ಇಂದ್ರಾಳಿ ಲಯನ್ಸ್ ಕ್ಲಬ್ ಅದ್ಯಕ್ಷ ಮಹಮ್ಮದ್ ಮೌಲ, ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಝ್ ಪಳ್ಳಿ ಉಪಶ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಯು.ಆರ್.ಚಂದ್ರಶೇಖರ್ ಸ್ವಾಗತಿಸಿದರು.

ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ತಿಲಕ್ ರಾಜ್ ಸಾಲ್ಯಾನ್ ವಂದಿಸಿದರು. ಹಿರಿಯ ಸದಸ್ಯ ರಮೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News