ಮೆಕ್ಯಾನಿಕ್‌ಗಳಿಗೆ ಉಚಿತ ಸಲಕರಣೆ ವಿತರಣೆ
ಉಡುಪಿ, ನ.20: ಉಡುಪಿಯ ಪವನ್ ಮೋಟಾರ್ಸ್ ಮತ್ತು ಬಜಾಜ್ ಅಟೋ ಲಿಮಿಟೆಡ್‌ನ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಸ್ಥಳೀಯ ನಾಲ್ಕು ಅಟೋರಿಕ್ಷಾ ಮೆಕ್ಯಾನಿಕ್‌ಗಳಿಗೆ ತಲಾ ಸುಮಾರು 40,000 ರೂ. ಮೌಲ್ಯದ ಸಲಕರಣೆಗಳು, ಏರ್‌ಕಂಪ್ರೆಸ್ಸರ್, ಸ್ಪೆಷಲ್ ಟೂಲ್‌ಗಳನ್ನು ಇತ್ತೀಚೆಗೆ ಉಚಿತವಾಗಿ ಹಸ್ತಾಂತರಿಸಲಾಯಿತು.
ಬಜಾಜ್ ಕಂಪನಿಯ ಏರಿಯಾ ಮೆನೇಜರ್ ಅರುಣ್ ಗಾಯಕ್‌ವಾಡ್, ಬಜಾಜ್ ಅಟೋ ಲಿ.ನ ರಿಜಿನಲ್ ಸರ್ವಿಸ್ ಮೆನೆಜರ್ ಅನಿಲ್ ಕಪಿಲೆ, ಪವನ್ ಮೋಟಾರ್ ಸಂಸ್ಥೆಯ ಆಡಳಿತ ಪಾಲುದಾರ ಸುಭಾಶ್ಚಂದ್ರ ಹೆಗಡೆ, ಜಿಲ್ಲಾ ಅಟೋ ಚಾಲಕರ ಮತ್ತು ಮಾಲಕರ ಸಂಘಗಳ ಒಕ್ಕೂಟದ ಕೋಶಾ ಧಿಕಾರಿ ಹರೀಶ್ ಕೋಟ್ಯಾನ್ ಮಾತನಾಡಿದರು.
ಪವನ್ ಮೋಟಾರ್ಸ್‌ನ ಸೇವಾ ವ್ಯವಸ್ಥಾಪಕ ಪ್ರಮೋದ್ ಜತ್ತನ್ನ ಸ್ವಾಗತಿಸಿ, ಸ್ಪೇರ್ಸ್ ಮೆನೆಜರ್ ನಾಗರಾಜ್ ರಾವ್ ವಂದಿಸಿದರು. ಡೀಲರ್ ಸರ್ವೀಸ್ ಇಂಜಿನಿಯರ್ ಪ್ರಶಾಂತ್ ಹೊಸ ವಾಹನಗಳ ತಾಂತ್ರಿಕತೆಯ ಬಗ್ಗೆ ವಿವರಣೆ ನೀಡಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಮಟ್ಟು ರಾಜೇಶ್ ರಾವ್ ಕಾರ್ಯಕ್ರಮ ನಿರೂಪಿಸಿದರು.