×
Ad

ನುಡಿಸಿರಿಯಲ್ಲಿ ಸದ್ದು ಮಾಡಿದ ನೋಟುಗಳು !

Update: 2016-11-20 19:25 IST

ಮೂಡುಬಿದಿರೆ, ನ.20: ಕಳೆದ ಎರಡು ವಾರಗಳಿಂದ 1,000 ಮತ್ತು 500 ರೂ. ನೋಟುಗಳ ಬ್ಯಾನ್‌ನಿಂದಾಗಿ ಚಿಲ್ಲರೆ ಸಮಸ್ಯೆಯನ್ನು ಎದುರಿಸುತ್ತಿರುವ ಜನರು ತಮ್ಮಲ್ಲಿದ್ದ ಹಳೆಯ ನೋಟುಗಳನ್ನು ಬದಲಾವಣೆ ಮಾಡಿಸಿಕೊಳ್ಳಲು ನುಡಿಸಿರಿಯನ್ನು ಬಳಸಿಕೊಂಡಿದ್ದಾರೆ.

ನುಡಿಸಿರಿಗಾಗಿ ಉತ್ತರ ಕರ್ನಾಟಕದಿಂದ ಬಂದಿರುವ ಕೆಲವು ಸಾಹಿತ್ಯಾಸಕ್ತರು ಒಂದು ಸಾವಿರ ಮತ್ತು ಐನೂರ ಕೆಲವು ನೋಟುಗಳನ್ನು ತಂದಿದ್ದಾರೆ. ನುಡಿಸಿರಿಯಲ್ಲಿರುವ ವಿವಿಧ ಮಳಿಗೆಗಳಲ್ಲಿ ಈ ನೋಟುಗಳನ್ನು ಬದಲಾವಣೆ ಮಾಡಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡು ಬಂದಿದ್ದರು. ಆದರೆ ಅಂಗಡಿ ಮಳಿಗೆಗೆಗಳಲ್ಲಿ ನೋಟುಗಳನ್ನು ಬದಲಾವಣೆ ಮಾಡಲು ಸಾಧ್ಯವಾಗದ ಹಿನ್ನಲೆಯಲ್ಲಿ ನುಡಿಸಿರಿಗೆ ಬಂದಿರುವ ಕೆಲವು ಜನರಲ್ಲಿ 500 ರೂ ಕೊಡುತ್ತೇನೆ ತನಗೆ ಹಿಂದೆ 400ರೂ ಚಿಲ್ಲರೆ ನೋಟು ಹಿಂತಿರುಗಿಸಿದರೆ ಸಾಕು ಎಂದು ಚಿಲ್ಲರೆಗಾಗಿ ಪ್ರಯತ್ನಿಸಿದ್ದಾರೆ.

ಅಂಗಡಿ ಮಳಿಗೆಗಳಲ್ಲಿ ವಸ್ತುಗಳನ್ನು ಖರೀದಿಸಿದ ಜನರು 1000-500ರ ನೋಟುಗಳನ್ನು ನೀಡಿದ್ದಾರೆ. ಇದನ್ನು ಸ್ವೀಕರಿಸದ ಅಂಗಡಿ ಮಾಲಕರುಗಳಿಗೆ ಮತ್ತೆ ತಮ್ಮಲ್ಲಿ ಚಿಲ್ಲರೆ ಹಣವನ್ನು ನೀಡಿದ್ದಾರೆ. ಅಂಗಡಿ ಮಳಿಗೆಯವರಿಗೆ ಸ್ವಲ್ಪ ನೋಟಿನ ಸಮಸ್ಯೆ ಕಾಡಿದರೂ ಹೆಚ್ಚಿನ ಜನರು ಚಿಲ್ಲರೆ ನೋಟುಗಳನ್ನು ಇಟ್ಟುಕೊಂಡದರಿಂದ 2000 ನೋಟು ಕೊಟ್ಟರೆ ಚೇಂಜ್‌ಗಳನ್ನು ನೀಡಿದ್ದಾರೆ. ಇನ್ನು ಕೆಲವು ಕಡೆ ಅಂಗಡಿ ಮಾಲಕರಲ್ಲಿ ಕಾರ್ಡ್ ನೀಡಿ ವಸ್ತುಗಳನ್ನು ಖರೀಸಬಹುದೇ ಎಂಬ ಪ್ರಶ್ನೆಗಳೂ ಗ್ರಾಹಕರಿಂದ ಬಂದಿದ್ದು ಅದಕ್ಕೆ ಸಾಧ್ಯವಿಲ್ಲವೆಂದು ಮಾಲಕರು ತಿಳಿಸಿದಾಗ ಸುಮ್ಮನೆ ಹಿಂತಿರುಗಿ ಹೋಗಿದ್ದಾರೆ.

ಇದರಿಂದಾಗಿ ಜನರು ಸಮಸ್ಯೆಯನ್ನು ಅನುಭವಿಸಿದರೂ ಅಂಗಡಿ ಮಾಲಕರುಗಳಿಗೆ ಚಿಲ್ಲರೆಯ ಸಮಸ್ಯೆಗಳಾಗಿಲ್ಲ. ಆದರೆ ನೋಟುಗಳನ್ನು ಬದಲಾವಣೆ ಮಾಡಿ ಚೇಂಜ್ ಪಡೆದುಕೊಳ್ಳಬಹುದು ಎಂದು ನಿರೀಕ್ಷೆ ಇಟ್ಟುಕೊಂಡು ಬಂದವರು ಮಾತ್ರ ತಮ್ಮ ಕೆಲಸವಾಗಿಲ್ಲವೆಂದು, ಸಾಹಿತ್ಯವನ್ನು ಮಾತ್ರ ಅನುಭವಿಸಿಕೊಂಡು ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News