×
Ad

ಮಲ್ಯರ ಸಾಲ ಮನ್ನಾ : ಸ್ವಚ್ಛತಾ ಕಾರ್ಮಿಕನೋರ್ವ ಎಸ್‌ಬಿಐಗೆ ಏನೆಂದು ಪತ್ರ ಬರೆದ ಗೊತ್ತೇ ?

Update: 2016-11-20 19:49 IST

ಮುಂಬೈ, ನ.20: ವಿಜಯ ಮಲ್ಯರ 1,200 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದೀರಿ. ನನ್ನ 1.5 ಲಕ್ಷ ಸಾಲವನ್ನು ಯಾಕೆ ಮನ್ನಾ ಮಾಡುವುದಿಲ್ಲ - ಹೀಗೆಂದು ಪ್ರಶ್ನಿಸಿ ಸ್ವಚ್ಛತಾ ಕಾರ್ಯ ನಿರ್ವಹಿಸುವ ವ್ಯಕ್ತಿಯೋರ್ವ ಸ್ಟೇಟ್‌ಬ್ಯಾಂಕ್‌ಗೆ ಪತ್ರ ಬರೆದಿದ್ದಾನೆ.

ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ನಿವಾಸಿ ಬಾವುರಾವ್ ಸೋನಾವನೆ ಎಂಬಾತ ತ್ರಯಂಬಕೇಶ್ವರ ನಗರಪಾಲಿಕೆಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದಾನೆ. ವಿಜಯ ಮಲ್ಯ ಸೇರಿದಂತೆ ಕೆಲವು ಉದ್ದೇಶಪೂರ್ವಕ ಸುಸ್ತಿದಾರರ ಸಾಲವನ್ನು ಸ್ಟೇಟ್ ಬ್ಯಾಂಕ್ ಮನ್ನಾ ಮಾಡಿರುವುದಾಗಿ ವರದಿಯಾಗಿತ್ತು. ಇದೊಂದು ಉತ್ತಮ ನಿರ್ಧಾರವಾಗಿದ್ದು ಇದಕ್ಕೆ ಅಭಿನಂದನೆ ಸಲ್ಲಿಸಿ ಬ್ಯಾಂಕ್‌ಗೆ ಪತ್ರ ಬರೆದಿದ್ದೇನೆ. ಜೊತೆಗೆ ನನ್ನ 1.5 ಲಕ್ಷ ಸಾಲವನ್ನೂ ಮನ್ನಾ ಮಾಡಬೇಕೆಂದು ಕೋರಿದ್ದೇನೆ ಎಂದು ಬಾವುರಾವ್ ತಿಳಿಸಿದ್ದಾನೆ. ತನ್ನ ಮಗನ ವೈದ್ಯಕೀಯ ಚಿಕಿತ್ಸೆಗಾಗಿ ಬಾವುರಾವ್ ಸಾಲ ಮಾಡಿದ್ದ. ತನ್ನ ಪತ್ರಕ್ಕೆ ಬ್ಯಾಂಕ್ ಮ್ಯಾನೇಜರ್ ಇನ್ನೂ ಉತ್ತರಿಸಿಲ್ಲ ಎಂದು ಬಾವುರಾವ್ ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News