13 ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

Update: 2016-11-20 15:07 GMT

ಮೂಡುಬಿದಿರೆ, ನ.20: ವಿವಿಧ ಕ್ಷೇತ್ರದ ಸಾಧಕರಾದ ಡಾ.ಗಿರಡ್ಡಿ ಗೋವಿಂದ ರಾಜ (ಸಾಹಿತ್ಯ), ಸುಬ್ರಾಯ ಚೊಕ್ಕಾಡಿ (ಸಾಹಿತ್ಯ), ಡಾ. ಚೆನ್ನಣ್ಣ ವಾಲೀಕಾರ (ಸಾಹಿತ್ಯ), ಡಾ. ಕೆ.ಆರ್. ಸಂಧ್ಯಾರೆಡ್ಡಿ (ಸಂಶೋಧನೆ). ಜಿ.ಎನ್. ರಂಗನಾಥ ರಾವ್ (ಮಾಧ್ಯಮ), ಕೆ.ವಿ. ಅಕ್ಷರ (ರಂಗೂಮಿ), ಹರಿಣಿ (ಸಿನೆಮಾ), ಶ್ರೀನಿವಾಸ ಜಿ. ಕಪ್ಪಣ್ಣ (ಸಂಘಟನೆ), ಶೀನಪ್ಪ ರೈ ಸಂಪಾಜೆ (ಯಕ್ಷಗಾನ), ಜಬ್ಬಾರ್ ಸಮೋ (ಯಕ್ಷಗಾನ), ಎಚ್.ಆರ್. ಲೀಲಾವತಿ (ಸುಗಮ ಸಂಗೀತ), ಡಾ. ಚಂದ್ರಶೇಖರ ಚೌಟ (ಕೃಷಿ), ಡಾ. ಜಿ. ಜ್ಞಾನಾನಂದ (ಶಿಲ್ಷ) ಅವರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 13 ನೆ ವರ್ಷದ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ರವಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಸಮ್ಮೇಳನಾಧ್ಯಕ್ಷೆ ಡಾ. ಬಿ.ಎನ್. ಸುಮಿತ್ರಾ ಬಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಅದ್ದೂರಿ ಸಮಾರಂದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಹೂ-ಹಾರ, ಶಾಲು, ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು 25 ಸಾವಿರ ರೂ. ನಗದು ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪುರಸ್ಕೃತರನ್ನು ಬ್ಯಾಂಡ್, ವಾದ್ಯ, ಡೋಲು, ವೀಣೆ, ಗೊಂಬೆ ಕುಣಿತದೊಂದಿಗೆ ವಿದ್ಯಾಗಿರಿಯ ಆವರಣದಿಂದ ಸಮ್ಮೇಳನದ ಮುಖ್ಯ ಸಬಾಂಗಣಕ್ಕೆ ಅದ್ದೂರಿ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು.

ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಹಾಗೂ ಶಾಸಕ ಕೆ.ಅಭಯಚಂದ್ರ ಜೈನ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಹಿರಿಯ ವಿದ್ವಾಂಸ ಡಾ. ಬಿ.ಎ. ವಿವೇಕ ರೈ ಉಪಸ್ಥಿತರಿದ್ದರು.

ಕನ್ನಡಿಗರ ಸ್ವಾಭಿಮಾನದ ಸಂಕೇತವಿದು: ಡಾ. ಮೋಹನ ಆಳ್ವ

ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ ನುಡಿಸಿರಿಯ ರುವಾರಿ ಡಾ. ಎಂ.ಮೋಹನ ಆಳ್ವ, ಕಳೆದ ಮೂರು ದಿನದಿಂದ ನಡೆಯುತ್ತಿರುವ ಈ ನುಡಿಸಿರಿಗೆ ದೇಶ-ವಿದೇಶದ ಸಾವಿರಾರು ಮಂದಿ ಆಗಮಿಸಿ ನನ್ನ ಆತ್ಮಸ್ಥೈರ್ಯ ಹೆಚ್ಚಿಸಿದ್ದಾರೆ. ಕಿರಿಯರಿಂದ ಹಿಡಿದು ಹಿರಿಯರವರೆಗಿನ ಎಲ್ಲರೂ ನನ್ನನ್ನು ಆಶೀರ್ವಾದಿಸಿದ್ದಾರೆ. ನಿಮ್ಮ ಪ್ರೀತಿಗೆ ನಾನು ಅಬಾರಿಯಾಗಿದ್ದೇನೆ. ನಿಮ್ಮೆಲ್ಲರ ಹೃದಯ ಗೆದ್ದ ಸಮ್ಮೇಳನ ಮತ್ತು ಕನ್ನಗಿಗರ ಸ್ವಾಭಿಮಾನದ ಸಂಕೇತವಿದು ಎಂದು ನಾನು ಬಾವಿಸುತ್ತೇನೆ ಎಂದು ಹೇಳಿದರು.

ಈ ಬಾರಿಯ ನುಡಿಸಿರಿಯಲ್ಲಿ ಕೆ.ವಿ. ಅಕ್ಷರ ಪ್ರಶಸ್ತಿ ಪುರಸ್ಕೃತರಾದರೆ ಹಿಂದೆ ಅವರ ತಂದೆ ಕೆ.ವಿ. ಸುಬ್ಬಣ್ಣ ಪ್ರಶಸ್ತಿಗೆ ಭಾಜನರಾಗಿದ್ದರು. ಅದೇ ರೀತಿ ಈ ಬಾರಿ ಡಾ. ಚಂದ್ರಶೇಖರ ಚೌಟ ಪ್ರಶಸ್ತಿ ಪುರಸ್ಕೃತರಾದರೆ ಹಿಂದೆ ಅವರ ಸಹೋದರ ಡಾ. ಡಿ.ಕೆ. ಚೌಟ ಪುರಸ್ಕೃತರಾಗಿದ್ದರು. ಇದು ನುಡಿಸಿರಿಯ ವಿಶೇಷತೆಗಳಲ್ಲೊಂದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News