×
Ad

ರೈಲು ಅಪಘಾತ: ನಾಲ್ಕು ರೈಲುಗಳು ರದ್ದು

Update: 2016-11-20 20:49 IST

ಅಲಹಾಬಾದ್,ನ.20: ಕಾನಪುರದ ಪುಖರಾಯಾಂ ಸಮೀಪ ಇಂದೋರ್-ಪಟ್ನಾ ಎಕ್ಸಪ್ರಸ್ ರೈಲು ಹಳಿ ತಪ್ಪಿದ ಹಿನ್ನಲೆಯಲ್ಲಿ ಭಾರತೀಯ ರೈಲ್ವೆಯು ರವಿವಾರ ನಾಲ್ಕು ರೈಲುಗಳ ಸಂಚಾರವನ್ನು ರದ್ದುಗೊಳಿಸಿತಲ್ಲದೆ, ಹಲವಾರು ರೈಲುಗಳ ಸಂಚಾರ ಮಾರ್ಗವನ್ನು ಬದಲಿಸಿತು. ಝಾನ್ಸಿ-ಲಕ್ನೋ ಇಂಟರ್‌ಸಿಟಿ(11110,11109) ಮತ್ತು ಝಾನ್ಸಿ-ಕಾನಪುರ(51804,51803) ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಉತ್ತರ ಮಧ್ಯ ರೈಲ್ವೆ ವಿಭಾಗವು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಮಾರ್ಗ ಬದಲಾವಣೆಗೊಂಡ ರೈಲುಗಳು: ಲಕ್ನೋ-ಲೋಕಮಾನ್ಯ ಟಿಳಕ್ ಟರ್ಮಿನಸ್(ಎಲ್‌ಟಿಟಿ),ವಾರಣಾಸಿ-ಅಹ್ಮದಾಬಾದ್ ಸಾಬರಮತಿ ಎಕ್ಸಪ್ರೆಸ್, ಗೋರಖಪುರ-ಎಲ್‌ಟಿಟಿ ಕುಷಿನಗರ ಎಕ್ಸಪ್ರೆಸ್,ಕೋಲ್ಕತಾ-ಝಾನ್ಸಿ,ಛತ್ರಪತಿ ಶಿವಾಜಿ ಟರ್ಮಿನಸ್-ಲಕ್ನೋ ಪುಷ್ಪಕ್ ಎಕ್ಸಪ್ರೆಸ್, ಗ್ವಾಲಿಯರ್-ಬರಾವ್ನಿ ಮೇಲ್, ಗೋರಖಪುರ-ಯಶವಂತಪುರ ಎಕ್ಸಪ್ರೆಸ್,ಎಲ್‌ಟಿಟಿ-ಗೋರಖಪುರ ಎಕ್ಸಪ್ರೆಸ್, ಭೋಪಾಲ-ಲಕ್ನೋ ಎಕ್ಸಪ್ರೆಸ್, ಎಲ್‌ಟಿಟಿ-ಪ್ರತಾಪಗಡ ಎಕ್ಸಪ್ರೆಸ್, ಎಲ್‌ಟಿಟಿ-ಸುಲ್ತಾನಪುರ ಎಕ್ಸಪ್ರೆಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News