×
Ad

ಎರಡು ಸಾವಿರ ಮುಖ ಬೆಲೆಯ ನೋಟು ಸ್ವೀಕರಿಸಲು ಹಿಂದೇಟು

Update: 2016-11-20 23:10 IST

ಮಂಗಳೂರು, ನ.20:ನಗರದ ಎಟಿಎಂಗಳ ಕಳೆದ ಎರಡು ದಿನಗಳಿಂದ 2 ಸಾವಿರ ಮುಖ ಬೆಲೆ ಯ ನೋಟುಗಳು ಗ್ರಾಹಕರಿಗೆ ದೊರೆಯುತ್ತಿದ್ದರೂ ಅದನ್ನು ಪಡೆದುಕೊಳ್ಳಲು ಬರುತ್ತಿರುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ.

ನಗರದ ಮಾರುಕಟ್ಟೆಯಲ್ಲಿ ಚಿಲ್ಲರೆಯ ಅಭಾವ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. 2ಸಾವಿರ ರೂಪಾಯಿಯ ಹೊಸ ನೋಟುಗಳಿಗೆ ಚಿಲ್ಲರೆ ದೊರೆಯದೆ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರಸ್ಥರು ನಷ್ಟವನ್ನನುಭವಿಸುತ್ತಿದ್ದಾರೆ. ಜೊತೆಗೆ ಗ್ರಾಹಕರು ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಲಾಗದೆ ಪರದಾಡುವಂತಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 46 ಬ್ಯಾಂಕುಗಳ 634 ಬ್ಯಾಂಕ್ ಶಾಖೆಗಳು, 830 ಎಟಿಎಂಗಳಿದ್ದರೂ ಕಳೆದ 12ದಿನಗಳಲ್ಲಿ ಒಂದು ಬಾರಿಯೂ ಜನರಿಗೆ ಹಣ ನೀಡದೆ ಇರುವ ಎಟಿಎಂಗಳಿವೆ. ವಾರದಲ್ಲಿ ಒಂದೆರಡು ಬಾರಿ ಎರಡು ಸಾವಿರ ರೂಪಾಯಿ ಹಣವನ್ನು ಗ್ರಾಹಕರಿಗೆ ನೀಡಿದ ಎಟಿಎಂಗಳು ಕೆಲವಿದ್ದರೆ.

ನಿರಂತರವಾಗಿ 24 ಗಂಟೆ ಕಾರ್ಯನಿರ್ವಹಿಸುತ್ತಿರುವ ಎಟಿಎಂ ಜಿಲ್ಲೆಯಲ್ಲಿ ಕಂಡು ಬರದೆ ಇರುವ ಸ್ಥಿತಿ ನಿರ್ಮಾಣವಾಗಿದೆ. ನವೆಂಬರ್ 8ರಿಂದ ನೋಟು ಅಮಾನ್ಯಗೊಂಡ ಬಳಿಕ ಕ್ರೆಡಿಟ್ ಕಾರ್ಡ್‌ಗಳ ಹಾಗೂ ಅದನ್ನು ಬಳಸಲು ಉಪಯೋಗಿಸುವ ಯಂತ್ರ ಹೊಂದಿರುವ ಅಂಗಡಿಗಳಲ್ಲಿ ,ಹೊಟೇಲುಗಳಲ್ಲಿ ವ್ಯವಹಾರ ಸ್ವಲ್ಪ ಮಟ್ಟಿನಲ್ಲಿ ವ್ಯವಹಾರ ನಡೆಯುತ್ತಿದೆ .ಉಳಿದಂತೆ ಜಿಲ್ಲೆಯ ಶೇ 80ರಷ್ಟ ಕಡೆಗಳ ವ್ಯಾಪಾರ ವಹಿವಾಟುಗಳಿಗೆ ಸಮಸ್ಯೆಯಾಗಿದೆ.

ಪೆಟ್ರೋಲ್ ಬಂಕ್‌ಗಳಿಂದಲೂ ಚಿಲ್ಲರೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ.ಅಲ್ಲೂ ಹೊಸ ನೋಟು ಬಂದರೂ ಚಿಲ್ಲರೆ ಸಮಸ್ಯೆ ಉದ್ಭವಿಸಿದೆ. ಹೆಚ್ಚಿನ ಪೆಟ್ರೋಲ್ ಬಂಕ್‌ಗಳಲ್ಲಿ ಮುಕ್ತವಾಗಿ ಹಳೆ ನೋಟುಗಳನ್ನು ಸ್ವೀಕರಿಸಿ ಚಿಲ್ಲರೆ ನೀಡಿ ಗ್ರಾಹಕರಿಗೆ ಪೆಟ್ರೋಲ್ ನೀಡುವ ವ್ಯವಸ್ಥೆ ಕಂಡು ಬಂದಿಲ್ಲ.500 ರೂ ನೀಡಿದರೆ 500 ಚಿಲ್ಲರೆ ಇಲ್ಲ 500ರೂ ಪೆಟ್ರೋಲ್ ಹಾಕಿಕೊಳ್ಳಿ ಎನ್ನುತ್ತಾರೆ ಎನ್ನುವುದು ಗ್ರಾಹಕರ ದೂರು.ಈ ಬಗ್ಗೆ ಪಟ್ರೋಲ್ ಬಂಕ್‌ಗಳ ಮಾಲಕರ ಸಂಘಟನೆಯವರು ಪ್ರತಿಕ್ರೀಯೆ ನೀಡುತ್ತಾ ,ನಮ್ಮ ಬಳಿಯೂ ಗ್ರಾಹಕರಿಗೆ ಚಿಲ್ಲರೆ ನೀಡುವ ಸಮಸ್ಯೆ ಇದೆ.ಹಳೆ ನೋಟುಗಳನ್ನು ಪಡೆದುಕೊಂಡು ಸಾಕಷ್ಟು ಚಿಲ್ಲರೆ ನೀಡಲು ಸಾಧ್ಯವಿಲ್ಲದಂತಾಗಿದೆ.

ಹಣ ಮಾಡಲು ನಮಗೂ ಮಿತಿ ನಿಗದಿ ಪಡಿಸಲಾಗಿದೆ .ಚಿಲ್ಲರೆ ದೊರೆಯುತ್ತಿಲ್ಲ .ಕ್ರೆಡಿಟ್ ಕಾರ್ಡ್‌ಗಳನ್ನು ಗ್ರಾಹಕರು ಬಳಸಿ ಎಂದು ಸಲಹೆ ನೀಡುತ್ತಿರುವುದಾಗಿ ತಿಳಿಸುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಬಿಲ್ ಪಾವತಿ ಸಂದರ್ಭದಲ್ಲಿ 500,1000 ನೋಟುಗಳನ್ನು ಸ್ವೀಕರಿಸದೆ ಇರುವ ಸಮಸ್ಯೆ ಗಂಭೀರವಾಗಿದೆ.ಚೆಕ್ ಮೂಲಕ ಪಾವತಿಸಿದರೂ ನಿರಾಕರಿಸುತ್ತಿರುವ ಘಟನೆಗಳು ನಡೆಯುತ್ತಿವೆ.ಈ ಬಗ್ಗೆ ರಾಜ್ಯದ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಸಮಸ್ಯೆ ಪರಿಹಾರವಾಗಿಲ್ಲ. ಖಾಸಗಿ ಆಸ್ಪತ್ರೆಯವರಿಗೆ ಹಳೆ ನೋಟು ಸ್ವೀಕರಿಸಲು ಆದೇಶ ಇನ್ನೂ ಬಂದಿಲ್ಲ ಎಂದು ಕೈ ಚೆಲ್ಲಿದ ಘಟನೆ ನಗರದಲ್ಲಿ ನಡೆದಿದೆ ಎಂದು ಪ್ರಕರಣದಿಂದ ಸಂತ್ರಸ್ತರಾದವರು ಪತ್ರಿಕೆ ಗೆ ತಿಳಿಸಿದ್ದಾರೆ.

ಎಟಿಎಂಗಳಲ್ಲಿ ಅಥವಾ ಬ್ಯಾಂಕುಗಳಲ್ಲಿ ನೂರು ಅಥವಾ 500 ನೋಟುಗಳು ಸಮರ್ಪಕವಾಗಿ ಗ್ರಾಹಕರಿಗೆ ದೊರೆಯದಿದ್ದರೆ ಈ ಸಮಸ್ಯೆ ಬಗೆಹರಿಯುವುದು ಕಷ್ಟ ಎಂದು ಹೆಚ್ಚಿನ ಸಾರ್ವಜನಿಕರು ಅಭಿಪ್ರಾಯ ಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News