ಬ್ಯಾಂಕ್‌ಗೆ ನಗದು ಸಾಗಾಟ ಸಮಯದಲ್ಲಿ ಉಳಿತಾಯ
ಹೊಸದಿಲ್ಲಿ, ನ.21: ಹೆಲಿಕಾಪ್ಟರ್‌ಗಳು ಹಾಗೂ ಭಾರತೀಯ ವಾಯುಪಡೆಯ ವಿಮಾನಗಳನ್ನು ಬಳಸುವ ಮೂಲಕ ಪ್ರಿಂಟಿಂಗ್‌ನಿಂದ ಬ್ಯಾಂಕ್‌ನ ಮುಖ್ಯ ವಿತರಣಾಕೇಂದ್ರಕ್ಕೆ ನಗದು ಹಣವನ್ನು ಸಾಗಾಟ ಮಾಡಲಾಗುವುದು. ಇದರಿಂದ ಸರಕಾರಕ್ಕೆ ನಗದು ಸಾಗಾಟವನ್ನು 21 ದಿನಗಳ ಬದಲಿಗೆ 6 ದಿನಗಳಲ್ಲಿ ಮಾಡಲು ಸಾಧ್ಯವಾಗಲಿದೆ.
ಕೇಂದ್ರ ಸರಕಾರ ತನ್ನ ಈ ನಿರ್ಧಾರದಿಂದ ಇನ್ನೊಂದು ವಾರ ದೇಶದಲ್ಲಿ ಗರಿಷ್ಠ ಮೊತ್ತದ ನೋಟುಗಳ ನಿಷೇಧದಿಂದ ದೇಶದಲ್ಲಿ ಉದ್ಬವಿಸಿರುವ ಸಮಸ್ಯೆಗೆ ಪರಿಹಾರ ಸಿಗುವ ವಿಶ್ವಾಸದಲ್ಲಿದೆ. ನಗರ ಪ್ರದೇಶಗಳಲ್ಲಿ ನಗದು ಲಭ್ಯತೆಯಲ್ಲಿ ಸುಧಾರಣೆ ಕಂಡುಬಂದ ಬಳಿಕ ಸರಕಾರವು ಗ್ರಾಮೀಣ ಭಾಗಗಳಲ್ಲಿ ತನ್ನ ಗಮನವನ್ನು ಹರಿಸಲಿದೆ.
ಜ.15ರ ಬಳಿಕ ದೇಶದ ಆರ್ಥಿಕ ಚಟುವಟಿಕೆ ಸಾಮಾನ್ಯ ಸ್ಥಿತಿಗೆ ಮರಳಲಿದೆ. 500 ಹಾಗೂ 1000 ರೂ. ಮುಖಬಲೆಯ ಹಳೆಯ ನೋಟು ನಿಷೇಧ ನಿರ್ಧಾರದ ಬಳಿಕ ಬ್ಯಾಂಕ್‌ನಲ್ಲಿ ಸಾಕಷ್ಟು ಹಣ ಜಮೆಯಾಗಿದೆ. ಇದರಿಂದ ಸಿಗುವ ಲಾಭವನ್ನು ಬ್ಯಾಂಕ್‌ಗಳ ಮರು ಬಂಡವಾಳೀಕರಣ, ಮೂಲಭೂತ ಸೌಕರ್ಯಗಳು ಹಾಗೂ ಸಶಸ್ತ್ರ ಪಡೆಗಳಿಗೆ ಸುಧಾರಿತ ಶಸ್ತ್ರಾಸ್ತ್ರಗಳ ಖರೀದಿಗೆ ಬಳಕೆಯಾಗಲಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.