×
Ad

ಮೌಲಾನ ರಾಬೆಅ್ ನದ್ವಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅಧ್ಯಕ್ಷರಾಗಿ ಮರು ಆಯ್ಕೆ

Update: 2016-11-21 12:08 IST

ಕೊಲ್ಕತಾ, ನ. 21: ಪ್ರಮುಖ ಇಸ್ಲಾಮೀ ವಿದ್ವಾಂಸ ಮೌಲಾನ ರಾಬೆಅ್ ಹಸನಿ ನದ್ವಿ ಅಖಿಲಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಲಿ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಕಳೆದ ಮೂರು ದಿವಸಗಳಿಂದ ಕೊಲ್ಕತಾದಲ್ಲಿ ನಡೆಯುತ್ತಿರುವ ಬೋರ್ಡ್‌ನ 25ನೆ ವಾರ್ಷಿಕ ಸಮ್ಮೇಳನದಲ್ಲಿ ಅವರನ್ನು ಒಮ್ಮತದಿಂದ ಮರು ಆಯ್ಕೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

 ಮೌಲಾನ ಮುಹಮ್ಮದ್ ವಾಲಿ ರಹ್ಮಾನಿಯವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮರು ಆಯ್ಕೆ ಮಾಡಲಾಗಿದೆ. ಶಿಯಾ ವಿದ್ವಾಂಸ ಕಲ್ಬೆ ಸಾದಿಕ್, ಉತ್ತರಪ್ರದೇಶದಫಖ್ರುದ್ದೀನ್ ಅಶ್ರಫ್‌ರನ್ನು ಉಪಾಧ್ಯಕ್ಷರನ್ನಾಗಿ, ನಾಲ್ವರು ಮಹಿಳೆಯರನ್ನು ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ, ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ 40 ಸದಸ್ಯರ ಕೌನ್ಸಿಲನ್ನು ರೂಪೀಕರಿಸಲಾಗಿದೆ.

ಮೌಲಾನ ರಾಬಿಅ್ ಹಸನಿ ನದ್ವಿ ಲಕ್ನೊದ ಉನ್ನತ ಇಸ್ಲಾಮಿ ವಿದ್ಯಾಲಯ ನದ್ವತ್ತುಲ್ ಉಲಮಾದ ರೆಕ್ಟರ್ ಆಗಿದ್ದಾರೆ. 2002ರಲ್ಲಿ ಪ್ರಥಮವಾಗಿ ಅವರು ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಹಲವಾರು ಅಂತಾರಾಷ್ಟ್ರೀಯ ಇಸ್ಲಾಮಿಕ್ ಸಂಘಟನೆಗಳ ಸದಸ್ಯರಾಗಿದ್ದು, ಅನೇಕ ಗ್ರಂಥಗಳನ್ನು ಅವರು ರಚಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News