ಸ್ವದೇಶಿ ನಿರ್ಮಿತ ‘ಐಎಸ್‌ಎಸ್ ಚೆನ್ನೈ’ ಯುದ್ಧ ನೌಕೆ ಕಾರ್ಯಾರಂಭ
Update: 2016-11-21 13:20 IST
ಮುಂಬೈ, ನ.21: ಸ್ವದೇಶಿ ನಿರ್ಮಿತ ಹಾಗೂ ಕೋಲ್ಕತಾ ದರ್ಜೆಯ ನಿರ್ದೇಶಿತ ಕ್ಷಿಪಣಿ ನಾಶಕ ಯುದ್ಧ ನೌಕಾ ಪಡೆ ಐಎನ್‌ಎಸ್ ಚೆನ್ನೈ ಸೋಮವಾರ ಕಾರ್ಯಾರಂಭ ಮಾಡಿದೆ. ಈ ಮೂಲಕ ಅದು ನೌಕಾಪಡೆಗೆ ಸೇರಲು ಸಜ್ಜಾಗಿದೆ.
ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕರ್ ಸೋಮವಾರ ಮುಂಬೈನ ನೌಕಾ ಧಕ್ಕೆಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಐಎನ್‌ಎಸ್ ಚೆನ್ನೈ ಕಾರ್ಯಾರಂಭಕ್ಕೆ ಹಸಿರುವ ನಿಶಾನೆ ತೋರಿದರು.
ಐಎನ್‌ಎಸ್ ಚೆನ್ನೈ ಭಾರತದಲ್ಲಿ ನಿರ್ಮಾಣವಾಗಿರುವ ಅತ್ಯಂತ ದೊಡ್ಡ ಯುದ್ಧ ನೌಕಾ ಪಡೆಯಾಗಿದೆ. ಐಎನ್‌ಎಸ್ ಚೆನ್ನೈ ನೌಕಾ ಪಡೆಯನ್ನು ಮುಂಬೈನ ಮಝಗಾಂವ್‌ನ ಡಾಕ್ ಶಿಪ್ ಬಿಲ್ಡರ್ಸ್ ಲಿ. ನಿರ್ಮಾಣ ಮಾಡಿದೆ.
ಭಾರತದಲ್ಲಿ ನಿರ್ಮಾಣಗೊಂಡಿರುವ ಅತ್ಯಂತ ದೊಡ್ಡ ಕ್ಷಿಪಣಿ ನಾಶಕ ಹಡಗು ಇದಾಗಿದ್ದು, 164 ಮೀ. ಉದ್ದ ಹಾಗೂ 7,500 ಟನ್ ತೂಕವನ್ನು ಹೊಂದಿದೆ. ಪ್ರತಿ ಗಂಟೆಗೆ ಸುಮಾರು 55 ಕಿ.ಮೀ. ವೇಗದಲ್ಲಿ ಚಲಿಸಲಿದೆ.