ನ್ಯಾಯ, ನಿಷ್ಪಕ್ಷತೆ ಖಾತರಿಗೆ ದುಬೈಯಲ್ಲಿ ಹೊಸ ಕಾನೂನು

Update: 2016-11-21 08:48 GMT

ದುಬೈ, ನ. 21: ನ್ಯಾಯವ್ಯವಸ್ಥೆ ನಿಷ್ಪಕ್ಷಪಾತವಾಗಿ ಅಸ್ತಿತ್ವದಲ್ಲಿರಲು ತಾರತಮ್ಯದಿಂದ ಮುಕ್ತವಾಗಲು ಎಲ್ಲರಿಗೂ ನ್ಯಾಯವನ್ನು ಖಚಿತಗೊಳಿಸಲಿಕ್ಕಾಗಿ ಹೊಸಕಾನೂನು ತರಲಾಗುವುದೆಂದು ವರದಿಯಾಗಿದೆ. ಯುಎಇ ಉಪಾಧ್ಯಕ್ಷ , ಪ್ರಧಾನಿ ಮತ್ತುದುಬೈಯ ಆಡಳಿತಾಧಿಕಾರಿ ಶೇಖ್ ಮುಹಮ್ಮದ್ ಬಿನ್ ರಾಶಿದ್ ಮಕ್ತೂಂ ಹೊರಡಿಸಿದ ಜ್ಯುಡಿಶಿಯಲ್ ಅಥಾರಿಟಿ ಕಾನೂನು 13/2016 ಪ್ರಕಾರ ನ್ಯಾಯಪೀಠಕ್ಕೆ ಸಂಪೂರ್ಣ ಸ್ವಾತಂತ್ರ್ಯ ಮತ್ತು ಜನರಿಗೆ ಪೂರ್ಣ ನ್ಯಾಯವನ್ನು ದೃಢಪಡಿಸಲು ನಿರ್ದೇಶಿಸಲಾಗಿದೆ. ನ್ಯಾಯ ವ್ಯವಸ್ಥೆಯ ಅಂತಾರಾಷ್ಟ್ರೀಯ ಶಿಷ್ಟಾಚಾರಗಳನ್ನುಪಾಲಿಸಿ ಪಾರದರ್ಶಕವಾಗಿ, ಸಮಾನ ನ್ಯಾಯವನ್ನು ಸಂರಕ್ಷಿಸಿ ದಕ್ಷತೆಯನ್ನು ತೋರಿಸಿನ್ಯಾಯ ನಿರ್ವಹಿಸಲಿಕ್ಕಾಗಿ ಹೊಸ ಕಾನೂನು ತರಲಾಗುತ್ತಿದೆ. ನ್ಯಾಯಾಧೀಶರ ಅಧಿಕಾರದ ಮೇಲೆ ಯಾರೂ ಹಸ್ತಕ್ಷೇಪ ನಡೆಸುವಂತಿಲ್ಲ. ಕೋರ್ಟಿನಮುಂದೆ ಎಲ್ಲರೂ ಸಮಾನರು. ದೂರುದಾರರಿಗೆ ತನಿಖೆಯವೇಳೆ ಮತ್ತು ವಿಚಾರಣೆಯ ಸಮಯದಲ್ಲಿ ಎಲ್ಲಹಕ್ಕುಗಳನ್ನು ಒದಗಿಸಲಾಗುವುದು. ಕಾನೂನು ಉಲ್ಲಂಘಿಸದೆ ನ್ಯಾಯಾಧೀಶರ ವಿರುದ್ಧ ಯಾರೂ ಕೇಸು ಕೊಡುವಂತಿಲ್ಲ.

ನ್ಯಾಯ ನಿರ್ವಣೆಗೆ ಸಂಬಂಧಿಸಿ ದುಬೈ ಪ್ರತಿಪಾದಿಸುವ ಮೌಲ್ಯಗಳುಮತ್ತು ನೈತಿಕತೆ, ಪಾರದರ್ಶಕತೆಯನ್ನು ಖಚಿತಪಡಿಸಲಿಕ್ಕಾಗಿ ರೂಪುರೇಷೆಗಳನ್ನುರೂಪಿಸುವುದು ಇತ್ಯಾದಿಗಳಿಗಾಗಿ ದುಬೈ ಜುಡಿಶಿಯಲ್ ಕೌನ್ಸಿಲ್ ಅಸ್ತಿತ್ವಕ್ಕೆ ಬರಲಿದೆ. ಚೇರ್‌ಮೆನ್, ಡೆಪ್ಯುಟಿ ಚೇರ್‌ಮೆನ್, ವಿವಿಧ ನ್ಯಾಯಾಧೀಶರುಗಳು ಈ ಸಮಿತಿಯಲ್ಲಿರುತ್ತಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News