ಕೊಣಾಜೆ: `ಬೊಳ್ಮದ ಕಂಡಡೊಂಜಿದಿನತ್ತ ಗಮ್ಮತ್' ಕ್ರೀಡಾಕೂಟ ಉದ್ಘಾಟನೆ
ಕೊಣಾಜೆ, ನ.21: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ಇದರ ಕೊಣಾಜೆ ಗ್ರಾಮಸಮಿತಿ,ಯುವ ಘಟಕ ಮತ್ತು ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ಭಾನುವಾರದಂದು ಪರಂಡೆ ಕೆಸರು ಗದ್ದೆಯಲ್ಲಿ ನಡೆದ ಬೊಳ್ಮದ ಕಂಡಡೊಂಜಿ ದಿನತ್ತ ಗಮ್ಮತ್ತ್ ಮತ್ತು ಕೊಣಾಜೆ ಯುವ ಘಟಕದ ದಶಮ ಸಂಭ್ರಮ ಕಾರ್ಯಕ್ರಮ ನಡೆಯಿತು.
ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾದ ರಾಜ್ಯಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಅಂರಾಷ್ಟ್ರೀಯ ಪವರ್ ಲಿಫ್ಟರ್ ಏಕಲವ್ಯ ಪ್ರಶಸ್ತಿ ವಿಜೇತೆ ಕು.ಅಕ್ಷತಾ ಪೂಜಾರಿ,ಕೊಣಾಜೆ,ಮುಲಾರ ಅರಸು ಮುಂಡಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಬಿ ಸುರೇಶ್, ಕೊಣಾಜೆ ಗ್ರಾ.ಪಂ ಮಾಜಿ ಚೇರ್ಮೆನ್ ದೇವಪ್ಪ ಗಟ್ಟಿ,ಸಿದ್ಧಕಟ್ಟೆ ಸಂಗಬೆಟ್ಟುವಿನ ವೀರಭಧ್ರ ಮಹಮ್ಮಾಯಿ ದೇವಸ್ಥಾನದ ಗುರಿಕಾರ ಗಂಗಾಧರ ಸೆಟ್ಟಿಗಾರ್,ಕುಲಾಲ ಸಮಾಜ ಕೊಣಾಜೆಯ ಗುರಿಕಾರ ಧನಂಜಯ ಬಂಗೇರ,ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸ್ಥಾಪಕಾಧ್ಯಕ್ಷ ಬಾಬು ಪೂಜಾರಿ ಪಜೀರು,ಮಾಜಿ ಅಧ್ಯಕ್ಷರಾದ ಬಾಬು ಪೂಜಾರಿ ಪಾವೂರು,ಮಾಜಿ ಅಧ್ಯಕ್ಷ ಕೆ.ಕೃಷ್ಣಪ್ಪ ಪೂಜಾರಿ ಹರೇಕಳ,ಮಾಜಿ ಕೋಶಾಧಿಕಾರಿ ರಮೇಶ್ ಪೂಜಾರಿ ಕೊಣಾಜೆ,ಮಾಜಿ ಅಧ್ಯಕ್ಷ ತಿಮ್ಮಪ್ಪ ಪೂಜಾರಿ ಬೋಳಿಯಾರು,ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಪಿ.ರಾಘವ ಪೂಜಾರಿ ಪಜೀರು,ಬೆಳ್ಮ ಯು.ಬಿ,ಎಂ.ಸಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಧೋರತಿ ಜೆ.ಅಮ್ಮನ್ನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಗ್ರಾಮಚಾವಡಿಯ ಅಧ್ಯಕ್ಷ ಸುಭಾಶ್ ಧರ್ಮನಗರ ಸಭಾಧ್ಯಕ್ಷತೆ ವಹಿಸಿದ್ದರು. ಮಂಗಳೂರು ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು, ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್ ಪೂಜಾರಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಬೋಳಿಯಾರ್, ಬ್ರಹ್ಮಶ್ರೀ ಬಿಲ್ಲವ ವೇದಿಕೆ ಕೇಂದ್ರ ಸಮಿತಿ ಅಧ್ಯಕ್ಷ ಕೆ.ಟಿ ಸುವರ್ಣ, ಪತ್ರಕರ್ತ ಸತೀಶ್ ಕೊಣಾಜೆ, ದ.ಕ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಟಿ ಧರಣೇಂದ್ರ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಮಾಡೂರು ಸಾಯಿಮಂದಿರದ ಆಡಳಿತ ಮೊಕ್ತೇಸರ ಕೆ.ಪಿ ಸುರೇಶ್, ಬಿಜೆಪಿ ಜಿಲ್ಲಾ ಪ್ರ.ಕಾ ನಮಿತಾ ಶ್ಯಾಂ,ಕಾಂಗ್ರೆಸ್ ಮುಖಂಡರಾದ ದಿನೇಶ್ ಕುಂಪಲ, ಆಲ್ವಿನ್ ಡಿ ಸೋಜಾ,ಉದ್ಯಮಿ ಚಂದ್ರಹಾಸ್ ಪಂಡಿತ್ ಹೌಸ್,ತಾ.ಪಂ ಸದಸ್ಯೆ ಪದ್ಮಾವತಿ ಪೂಜಾರಿ, ಕಿಟೆಲ್ ಮೆಮೋರಿಯಲ್ ಪಿ.ಯು ಕಾಲೇಜಿನ ಪ್ರಾಂಶುಪಾಲ ವಿಠಲ ಕುಲಾಲ್,ಸ್ಥಳೀಯ ಮುಖಂಡರಾದ ದೇವಪ್ಪ ಶಾಂತಿ,ಅಬ್ದುಲ್ ನಾಸಿರ್ ಕೆ.ಕೆ, ರವಿ ಸುವರ್ಣ, ಪುರುಷೋತ್ತಮ್ ಅಂಚನ್,ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಪದಾಧಿಕಾರಿಗಳಾದ ಲೋಕೇಶ್ ಅಮೀನ್, ಹರೀಶ್ ಪೂಜಾರಿ, ಮಿಥುನ್ ಕುಮಾರ್, ವೇದಶ್ರೀ, ರವೀಂದ್ರ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.