×
Ad

ದಾನಿ ಮುಹಮ್ಮದ್ ಇರ್ಫಾನ್‌ರಿಗೆ ಅಭಿನಂದನೆ

Update: 2016-11-21 18:24 IST

ಶಿರ್ವ, ನ.21: ಶಿರ್ವ ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಮತ್ತು ಶಾಲೆಗೆ ಮೂಲಭೂತ ಸೌಕರ್ಯ ಗಳನ್ನು ಒದಗಿಸಲು ನೆರವಾದ ದಾನಿ ಮುಹಮ್ಮದ್ ಇರ್ಫಾನ್ ಅವರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಶಾಲಾ ಪ್ರಾಂಶುಪಾಲ ಬಿ.ಎಂ.ಬೀರಾ ಮೊದಿನ್ ದಾನಿ ಇರ್ಫಾನ್ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಏರ್ಪಡಿಸಲಾದ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಸಂಚಾಲಕ ಮುಹಮ್ಮದ್ ಇಮ್ರಾನ್, ಉಪಾಧ್ಯಕ್ಷ ಉಮ್ಮರ್ ಇಸ್ಮಾಯೀಲ್, ಕಾರ್ಯದರ್ಶಿ ವಹೀದ್ ಅಹ್ಮದ್, ವೌಲಾನ ಪರ್ವೇಝ್ ಆಲಂ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಫೆಲಿಸಿಟಾಸ್ ಪಿರೇರಾ ಸ್ವಾಗತಿಸಿದರು. ಸಹಶಿಕ್ಷಕಿ ಜೆನಿಫರ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News