ಮಾರ್ಕೋಸ್ ದೇಹವನ್ನು ಸ್ಮಶಾನದಿಂದ ಅಗೆದು ತೆಗೆಯಿರಿ
Update: 2016-11-21 21:06 IST
ಮನಿಲಾ (ಫಿಲಿಪ್ಪೀನ್ಸ್), ನ. 21: ಇಲ್ಲಿನ ರಾಷ್ಟ್ರೀಯ ಚೇತನಗಳ ಸ್ಮಶಾನದಲ್ಲಿ ಮೂರು ದಿನಗಳ ಹಿಂದೆ ಹೂಳಲಾಗಿರುವ ಫಿಲಿಪ್ಪೀನ್ಸ್‌ನ ಮಾಜಿ ಸರ್ವಾಧಿಕಾರಿ ಫರ್ಡಿನಾಂಡ್ ಮಾರ್ಕೋಸ್‌ರ ಮೃತದೇಹವನ್ನು ಹೊರದೆಗೆಯಲು ನಿರ್ದೇಶನ ನೀಡುವಂತೆ ಕೋರಿ ಪ್ರತಿಭಟನಕಾರರು ಸೋಮವಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲು ಹತ್ತಿದ್ದಾರೆ.
ಮೃತಪಟ್ಟು ಸುಮಾರು ಮೂರು ದಶಕಗಳು ಕಳೆದ ಬಳಿಕ ಮಾರ್ಕೋಸ್‌ರ ಪಾರ್ಥಿವ ಶರೀರವನ್ನು ಶುಕ್ರವಾರ ರಹಸ್ಯ ಕಾರ್ಯಕ್ರಮವೊಂದರಲ್ಲಿ ಸೇನಾ ಗೌರವದೊಂದಿಗೆ ‘ರಾಷ್ಟ್ರೀಯ ಚೇತನಗಳ’ ಸಮಾಧಿಯಲ್ಲಿ ದಫನ ಮಾಡಲಾಗಿತ್ತು.
‘‘ಜನರನ್ನು ಕೊಳ್ಳೆ ಹೊಡೆದ ಓರ್ವ ಸರ್ವಾಧಿಕಾರಿ ಹಾಗೂ ಮಾನವಹಕ್ಕುಗಳ ಉಲ್ಲಂಘನಕಾರನಿಗೆ ಒಳ್ಳೆಯ ವ್ಯಕ್ತಿಗಳಿಗಾಗಿ ಇರುವ ಸ್ಮಶಾನದಲ್ಲಿ ಸಮಾಧಿ ಮಾಡುವ ಗೌರವವನ್ನು ನೀಡಲು ಹೇಗೆ ಸಾಧ್ಯ?’’ ಎಂದು ಮಾರ್ಕೋಸ್‌ರ ಬಲಿಪಶುಗಳ ಕುಟುಂಬಿಕರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.