ಆಝಾನ್ ಕೇಳಿ ಭಾಷಣ ನಿಲ್ಲಿಸಿ ತಲೆ ಮುಚ್ಚಿಕೊಂಡ ಸೋನಿಯಾ ಗಾಂಧಿ
Update: 2016-11-21 21:10 IST
ಹೊಸದಿಲ್ಲಿ, ನ. 21 : ಅಲಹಾಬಾದ್ ನಲ್ಲಿ ನಡೆಯುತ್ತಿದ್ದ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಸೀದಿಯಿಂದ ಆಝಾನ್ ( ನಮಾಜ್ಹ್ ಗೆ ಕರೆ ) ಕೇಳಿ ಬಂದಾಗ ತಮ್ಮ ಭಾಷಣ ನಿಲ್ಲಿಸಿದ್ದಾರೆ. ಜೊತೆಗೆ ತಮ್ಮ ಸೀರೆಯಿಂದ ತಲೆಯನ್ನು ಮುಚ್ಚಿಕೊಂಡಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜಯಂತಿ ನಿಮಿತ್ತ ಆಯೋಜಿಸಲಾದ ವಸ್ತು ಪ್ರದರ್ಶನದಲ್ಲಿ ಅವರು ಭಾಗವಹಿಸಿದ್ದರು. ಅವರ ಜೊತೆ ರಾಹುಲ್ ಗಾಂಧಿ ಹಾಗು ಪ್ರಿಯಾಂಕಾ ಗಾಂಧಿ ಅವರೂ ಇದ್ದರು. "ಇಂದಿರಾ ಗಾಂಧಿ ಭಾರತವನ್ನು ಬಲಿಷ್ಠ ದೇಶವಾಗಿ ಮಾಡಲು ಬಯಸಿದ್ದರು " ಎಂದು ಸೋನಿಯಾ ಹೇಳುತ್ತಲೇ ಪಕ್ಕದ ಮಸೀದಿಯಿಂದ ಆಝಾನ್ ಕೇಳಿ ಬಂತು. ಆಗ ಸೋನಿಯಾ ತಕ್ಷಣ ತಮ್ಮ ಭಾಷಣ ನಿಲ್ಲಿಸಿದರು.