ಅಬುಧಾಬಿ: ಅನಿಲ ಸೋರಿಕೆಯಿಂದ ಮಧೂರು ನಿವಾಸಿ ಮೃತ್ಯು
Update: 2016-11-21 22:08 IST
ಕಾಸರಗೋಡು, ನ.21: ಅಬುಧಾಬಿಯಲ್ಲಿ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅನಿಲ ಸೋರಿಕೆ ಉಂಟಾದ ಪರಿಣಾಮ ಮಧೂರು ನಿವಾಸಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಮಧೂರು ಮನ್ನಿಪ್ಪಾಡಿ ವಿವೇಕಾನಂದ ನಗರದ ಅಶೋಕ್ (32) ಮೃತಪಟ್ಟವರು. ಉಳಿದ ಇಬ್ಬರ ಬಗ್ಗೆ ಮಾಹಿತಿ ಲಭಿಸಿಲ್ಲ.
ಅಶೋಕ್ ಸೌತ್ ವಿಂಗ್ಸ್ ಇಂಟೀರಿಯರ್ ಕಂಪೆನಿಯ ನೌಕರರಾಗಿದ್ದರು. ಅಬುಧಾಬಿಯ ಬೆತ್ತಿನ್ ಎಂಬಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ದುರಂತ ನಡೆದಿದೆ. ಅನಿಲ ಸೋರಿಕೆಯಿಂದ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಶೋಕ್ ಎಪ್ರಿಲ್ ತಿಂಗಳಲ್ಲಿ ವಿವಾಹವಾಗಿದ್ದರು. ಜೂ.28 ರಂದು ಅಬುಧಾಬಿಗೆ ತೆರಳಿದ್ದರು.
ಮೃತದೇಹವನ್ನು ಅಬುಧಾಬಿಯ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮೃತದೇಹವನ್ನು ಊರಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.