ಪುತ್ತೂರು: ಅಟ್ಟಾ ಮುಟ್ಟಾ ಮಕ್ಕಳ ನಾಟಕೋತ್ಸವ

Update: 2016-11-21 17:52 GMT

ಪುತ್ತೂರು, ನ.21: ನಿರತನಿರಂತ ಮತ್ತು ಬಹುವಚನಂ ಆಯೋಜನೆಯಲ್ಲಿ ಪುತ್ತೂರಿನಲ್ಲಿ ನಿರಂತರವಾಗಿ 14 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಅಟ್ಟಾ ಮುಟ್ಟಾ ನಾಟಕೋತ್ಸವ ನ.18ರಿಂದ 20ರ ತನಕ ಪುತ್ತೂರಿನ ನೆಹರೂ ನಗರದ ಕಾಡು ಬಯಲು ರಂಗಮಂದಿರದಲ್ಲಿ ನಡೆಯಿತು.

3 ದಿನಗಳ ಕಾಲ ನಡೆದ ನಾಟಕೋತ್ಸವದಲ್ಲಿ ನ.18ರಂದು ರಂಗಾಯಣ ರೆಪರ್ಟರಿ ಧಾರವಾಡ ಪ್ರಯೋಗಿಸುವ ರಷ್ಯನ್ ನಾಟಕಕಾರ ಆಂಟನಿ ಚಿಕಾವ್‌ನ ಆಯ್ದ ಕಥೆಗಳ ರಂಗರೂಪ ‘ಚೆಕಾವ್ ಟು ಶಾಂಪೇನ್’ ಚಿದಂಬರ ರಾವ್ ಜಂಬೆ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.

ನ.19ರಂದು ಕಿನ್ನರ ಮೇಳ ತುಮರಿ ಪ್ರಸ್ತುತ ಪಡಿಸುವ ವಿಲಿಯಂ ಷೇಕ್ಸ್‌ಪಿಯರ್‌ನ ಮಹಾನಾಟಕ ಕ.ವೆಂ. ರಾಜಗೋಪಾಲ ಅನುವಾದದ ‘ಕೋರಿಯೋಲೇನಸ್’ ಡಾ. ಶ್ಯಾಂ ಕುಟ್ಟಿ ಪಟ್ಟಾಂಕರಿ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು. ನ.20ರಂದು ವೌನೇಶ್ ವಿಶ್ವಕರ್ಮ ನಿರ್ದೇಶನದಲ್ಲಿ ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯ ನೇಸರ ನಾಟಕ ತಂಡದಿಂದ ‘ಕನಸು’ ನಾಟಕ, ಹಾರಾಡಿ ಸರಕಾರಿ ಶಾಲೆಯ ಡಾ.ಶಿವರಾಮ ಕಾರಂತ ಸಾಹಿತ್ಯ ವೇದಿಕೆ ತಂಡದಿಂದ ಶಿಕ್ಷಕ ಪ್ರಶಾಂತ್ ಅನಂತಾಡಿ ನಿರ್ದೇಶನದಲ್ಲಿ ‘ಮುಖಾಮುಖಿ’ ನಾಟಕ ಹಾಗೂ ಕಿನ್ನರ ಮೇಳ ತುಮರಿ ಪ್ರಸ್ತುತ ಪಡಿಸುವ ಮೊರ್ಲಿ ಎಡ್ವರ್ಡ್ ಕ್ಯಾಲಹಾನ್ ಅವರ ಮೂಲಕಥೆ ಆಧಾರಿತ ಬಿ. ಜನಾರ್ಧನ ಅನುವಾದಿತ ‘ಸ್ಟೀವ್‌ಗೊಂದು ಕ್ಯಾಪು’ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News