×
Ad

ನ.27ರಂದು ಸರಕಾರಿ ನೌಕರರ ಮಹಾಸಭೆ

Update: 2016-11-21 23:51 IST

 ಉಡುಪಿ, ನ.21: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ವಾರ್ಷಿಕ ಮಹಾಸಭೆಯು ನ.27ರಂದು ಬೆಳಗ್ಗೆ 10 ಗಂಟೆಗೆ ಹೊಟೇಲ್ ಶಾರದಾ ಇಂಟರ್‌ನ್ಯಾಷನಲ್‌ನಲ್ಲಿ ನಡೆಯಲಿದೆ.

ಈ ಸಂದರ್ಭ 2015ನೆ ಸಾಲಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆಗೈದ ಸರಕಾರಿ ನೌಕರರು ಹಾಗೂ ನೌಕರರ ಮಕ್ಕಳನ್ನು 2015-16ನೆ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುನಲ್ಲಿ ಶೇ.85ಕ್ಕಿಂತ ಹೆಚ್ಚಿನ ಅಂಕ ಪಡೆದ ನೌಕರರ ಮಕ್ಕಳನ್ನು, ಅಲ್ಲದೇ 2016ನೆ ಜನವರಿಯಿಂದ ಅಕ್ಟೋಬರ್‌ವರೆಗೆ ನಿವೃತ್ತರಾದ ಸರಕಾರಿ ನೌಕರರನ್ನು ಸನ್ಮಾನಿಸಲಾಗುವುದು. ಬೆಳಗ್ಗೆ 10ಕ್ಕೆ ಜೇಸಿಐ ಇಂಡಿಯಾದ ರಾಷ್ಟ್ರೀಯ ತರಬೇತುದಾರ ಮಂಜುನಾಥ ಡಿ. ಇವರಿಂದ ‘ಒತ್ತಡ ನಿರ್ವಹಣೆ’ ಕುರಿತ ಕಾರ್ಯಗಾರ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News