ಬಜ್ಪೆ ರೇಂಜ್ ಎಸ್‌ಎಂಎ ರಚನೆ
Update: 2016-11-23 22:00 IST
ಮಂಗಳೂರು, ನ. 23: ಬಿ.ಎಂ.ಝೈನುದ್ದೀನ್ ಸಅದಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬಜ್ಪೆಯ ಎಂಜೆಎಂ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಸುನ್ನೀ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಬಜ್ಪೆ ರೇಂಜ್ ರಚಿಸಲಾಯಿತು.
ಕೆ.ಬಿ.ಇಬ್ರಾಹೀಂ ಮದನಿ ದುವಾ ನೆರವೇರಿಸಿದರು. ಎಸ್‌ಜೆಎಂ ರಾಜ್ಯಾಧ್ಯಕ್ಷ ಆತೂರು ಸಅದ್ ಮುಸ್ಲಿಯಾರ್, ಸ್ಥಳೀಯ ಜಮಾಅತ್ ಅಧ್ಯಕ್ಷ ಹಾಜಿ ಇಸ್ಮಾಯೀಲ್ ಜಾವಳೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಇಂಜಿನಿಯರ್, ಪ್ರಧಾನ ಕಾರ್ಯದರ್ಶಿಯಾಗಿ ಬದ್ರುದ್ದೀನ್ ಸಖಾಫಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹುಸೈನ್ ಶಾಫಿ ಬಜ್ಪೆ, ಸುಲೈಮಾನ್ ಕಿನ್ನಿಪದವು, ಹಮ್ಮಬ್ಬ ಜರಿನಗರ, ಮುಹಮ್ಮದ್ ಸಾಲಿಹ್, ಅಬ್ದುಲ್ ಸತ್ತಾರ್ ಪಡೀಲ್, ಬಶೀರ್ ತಾರಿಕಂಬಳ ಅವರನ್ನು ಆಯ್ಕೆ ಮಾಡಲಾಯಿತು. ರೇಂಜ್ ಕಾರ್ಯದರ್ಶಿ ಎಂ.ಎ.ಅಬ್ದುರ್ರಝಾಕ್ ಸಖಾಫಿ ಮಠ ವಂದಿಸಿದರು.