ಅಂಗಡಿಗಳಿಗೆ ನುಗ್ಗಿ ಕಳವು
Update: 2016-11-23 23:28 IST
ಮಂಗಳೂರು, ನ. 23: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮಾಸ್ತಿಕಟ್ಟೆ ದರ್ಗಾ ರಸ್ತೆಯಲ್ಲಿರುವ ಎರಡು ಅಂಗಡಿಗಳಿಗೆ ಕನ್ನ ಹಾಕಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಮಾಸ್ತಿಕಟ್ಟೆ ದರ್ಗಾ ರಸ್ತೆಯಲ್ಲಿರುವ ಮುಹಮ್ಮದ್ ಯು.ಬಿ. ಎಂಬವರಿಗೆ ಸೇರಿದ ಮೊಬೈಲ್ ಅಂಗಡಿಯಿಂದ ಕಳ್ಳರು ಮೊಬೈಲ್ ಹಾಗೂ ಚಾರ್ಜರ್‌ಗಳನ್ನು ಕಳವುಗೈದಿದ್ದಾರೆ ಎಂದು ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಅಲ್ಲದೆ, ಹತ್ತಿರದಲ್ಲಿದ್ದ ಅಬೂಬಕರ್ ಎಂಬವರಿಗೆ ಸೇರಿದ ಗೂಡಂಗಡಿಗೂ ಕಳ್ಳರು ನುಗ್ಗಿ ಸಿಗರೇಟ್‌ಗಳು ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 10 ಗಂಟೆಯಿಂದ ಬುಧವಾರ ಬೆಳಗ್ಗೆ 8 ಗಂಟೆಯ ಮಧ್ಯದಲ್ಲಿ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಅಂಗಡಿ ತೆರೆಯಲು ಬಂದಾಗ ಬೆಳಕಿಗೆ ಬಂದಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.