×
Ad

ಲಕ್ಷಾಂತರ ರೂ. ವೌಲ್ಯದ ವಜ್ರದ ಉಂಗುರ ಕಳವು

Update: 2016-11-23 23:29 IST

ಮಂಗಳೂರು, ನ. 23: ಮನೆಯ ಲಾಕರ್‌ನಲ್ಲಿರಿಸಿದ್ದ ಸುಮಾರು 14 ಲಕ್ಷ ರೂ. ವೌಲ್ಯದ ವಜ್ರದ ಉಂಗುರ ಕಳವಾಗಿರುವ ಘಟನೆ ನಗರದ ಲೋಬೊ ಲೇನ್‌ನಲ್ಲಿ ನಡೆದಿದೆ.

ಲೋಬೊ ಲೇನ್‌ನ ನಿವಾಸಿ ಯೂಸುಫ್ ಎಂಬವರಿಗೆ ಸೇರಿದ ಈ ವಜ್ರದ ಉಂಗುರ ನವೆಂಬರ್ 15ರಿಂದ ನ.20ರ ನಡುವೆ ಕಳುವಾಗಿದೆ. ವಜ್ರದ ಉಂಗುರವನ್ನು ಯೂಸುಫ್ ಅವರ ತಮ್ಮ ಮನೆಯ ರೂಮಿನ ಲಾಕರ್‌ನಲ್ಲಿರಿಸಿದ್ದರು. ಈ ವಜ್ರದ ಉಂಗುರವು ಯೂಸುಫ್ ಅವರಿಗೆ ಮದುವೆ ಸಂದರ್ಭದಲ್ಲಿ ಉಡುಗೊರೆಯಾಗಿ ದೊರೆತಿತ್ತು. ಇದರೊಂದಿಗೆ ಲಾಕರ್‌ನಲ್ಲಿದ್ದ 700 ಬ್ರಿಟಿಷ್ ಪೌಂಡ್ ಕರೆನ್ಸಿಯೂ ಕಳವಾಗಿದೆ ಎಂದು ಯೂಸುಫ್ ಅವರು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News