ಅಬುಧಾಬಿ-ದುಬೈ ಹೊಸ ಹೆದ್ದಾರಿ ಮುಂದಿನ ವರ್ಷ ಸಿದ್ಧ

Update: 2016-11-23 18:45 GMT

ಅಬುಧಾಬಿ, ನ. 23: 62 ಕಿಲೋಮೀಟರ್ ಉದ್ದದ ಅಬುಧಾಬಿ-ದುಬೈ ರಾಷ್ಟ್ರೀಯ ಹೆದ್ದಾರಿ ಮುಂದಿನ ವರ್ಷದ ವೇಳೆಗೆ ಸಿದ್ಧಗೊಳ್ಳಲಿದೆ ಎಂದು ಅಬುಧಾಬಿ ಜನರಲ್ ಸರ್ವಿಸಸ್ ಕಂಪೆನಿ ‘ಮುಸನಾಡ’ ತಿಳಿಸಿದೆ.
ಅಬುಧಾಬಿಯ ಮಹತ್ವದ ಭೂ ಸಾರಿಗೆ ಯೋಜನೆಗಳ ಪೈಕಿ ಒಂದಾಗಿರುವ ಈ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣವನ್ನು ಮುನಿಸಿಪಲ್ ವ್ಯವಹಾರಗಳು ಮತ್ತು ಸಾರಿಗೆ ಇಲಾಖೆಯ ಸಹಕಾರದೊಂದಿಗೆ ಮುಸನ್ನದ ಕೈಗೆತ್ತಿಕೊಂಡಿದೆ.
ಪ್ರಸಕ್ತ ಹೆದ್ದಾರಿಯು ಈಗ ಅಸ್ತಿತ್ವದಲ್ಲಿರುವ ‘ಮುಹಮ್ಮದ್ ಬಿನ್ ಝಾಯೆದ್ ರಸ್ತೆ’ (ಇ311)ಯ ವಿಸ್ತರಣೆಯಾಗಿದೆ. ಅದು ಅಬುಧಾಬಿ-ದುಬೈ ಗಡಿಯಲ್ಲಿರುವ ಸೇಹ್ ಶುಐಬ್ ಪ್ರದೇಶವನ್ನು ಸ್ವೀಹನ್ ಇಂಟರ್‌ಚೇಂಜ್ ರಸ್ತೆಯೊಂದಿಗೆ ಸಂಪರ್ಕಿಸುತ್ತದೆ. ಪ್ರತಿ ದಿಕ್ಕಿನಲ್ಲಿ ನಾಲ್ಕು ಪಥಗಳಿವೆ ಹಾಗೂ ಹೆದ್ದಾರಿಯನ್ನು ಎರಡು ನಿರ್ಮಾಣ ಪ್ಯಾಕೇಜ್‌ಗಳಲ್ಲಿ ನಿರ್ಮಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆಯಕಟ್ಟಿನ ರಸ್ತೆಯಾಗಿರುವ ಇದು ನಿಬಿಡ ಅವಧಿಗಳಲ್ಲಿನ ಹೆಚ್ಚುವರಿ ದಟ್ಟಣೆಯನ್ನು ಸ್ವೀಕರಿಸುತ್ತದೆ. ನೂತನ ರಸ್ತೆಯು, ಅಬುಧಾಬಿ ನಗರ ಮತ್ತು ಅದರ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಹಾಗೂ ಯಾಸ್ ಮತ್ತು ಸಾದಿಯಾತ್ ದ್ವೀಪಗಳನ್ನು ಸಂಪರ್ಕಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News