×
Ad

ಶಾರುಖ್ - ಅನುಷ್ಕಾ ಜೋಡಿಯ ದಿ ರಿಂಗ್ ನಲ್ಲಿದೆ ಅತಿದೊಡ್ಡ ಅಚ್ಚರಿ !

Update: 2016-11-24 10:37 IST

ಗೋವಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ 10ನೇ ಚಿತ್ರಬಜಾರ್‌ನಲ್ಲಿ ಇಮ್ತಿಯಾಜ್ ಅಲಿ ತಮ್ಮ ಮುಂಬರುವ ಚಿತ್ರ ದಿ ರಿಂಗ್ ಬಗ್ಗೆ ತುಟಿ ಪಿಟಿಕ್ಕೆನ್ನಲಿಲ್ಲ. ಶಾರುಕ್ ಖಾನ್ ಹಾಗೂ ಅನುಷ್ಕಾ ಶರ್ಮಾ ಈ ಚಿತ್ರದ ತಾರಾಗಣದಲ್ಲಿದ್ದಾರೆ.

ನಸ್ರೀನ್ ಮುನ್ನಿ ಕಬೀರ್ ಆಯೋಜಿಸಿದ್ದ ಒಂದು ಗಂಟೆ ಕಾಲದ ಸಂವಾದದಲ್ಲಿ ಜಬ್ ವಿ ಮೆಟ್ ಚಿತ್ರ ನಿರ್ಮಾಪಕ, ಬಾಯಿಬಿಟ್ಟದ್ದು, ಚಿತ್ರದ ಒಂದು ಪಾತ್ರದ ನಗ್ನಕುಣಿತದ ದೃಶ್ಯವಿದೆ ಎನ್ನುವುದನ್ನು. ಇದು ಯಾರು ಎನ್ನುವುದನ್ನು ಪ್ರೇಕ್ಷಕರ ಕಲ್ಪನೆಗೇ ಬಿಟ್ಟಿದ್ದೇವೆ ಎಂದಿದ್ದಾರೆ, 2017ರಲ್ಲಿ ಈ ಚಿತ್ರ ಯೂರೋಪ್‌ನಲ್ಲಿ ಬಿಡುಗಡೆಯಾಗಲಿದೆ.

ಚಿತ್ರದ ಬಗ್ಗೆ ಮಾಹಿತಿ ನೀಡುವ ಬದಲು ಅಲಿ, ತಮ್ಮ ಸೃಜನಶೀಲ ಪ್ರಕ್ರಿಯೆ, ಪ್ರೇಮಕಥೆಗಳ ಬಗೆಗಿನ ಒಲವು, ಚಿತ್ರಗಳ ಭವಿಷ್ಯ ಹಾಗೂ ಎ.ಆರ್.ರಹಮಾನ್ ಜತೆ ಕಾರ್ಯನಿರ್ವಹಿಸುವ ಬಗೆಗೆ ಹರಟಿದರು. ಹಾಡುಗಳು ಅಲಿ ಚಿತ್ರದ ಜೀವಾಳ. ಆದರೆ ಅದನ್ನು ಹೇಗೆ ಬಳಸಬೇಕು ಎನ್ನುವುದು ತಿಳಿಯುತ್ತಿಲ್ಲ ಎಂದು ಅವರು ಹೇಳಿದರು. ಇಂದಿನ ವಿಶ್ವ ಸಿನೆಮಾದಿಂದ ಮರೆಯಾಗುತ್ತಿರುವ ಅದನ್ನು ಉಳಿಸಿಕೊಳ್ಳುವ ಮಾರ್ಗ ಕಂಡುಹಿಡಿಯಬೇಕಿದೆ ಎಂದರು.

ಸಂವಾದದಲ್ಲಿ ಪ್ರೇಕ್ಷಕರ ಸವಾಲಿಗೆ ನೇರ ಉತ್ತರ ನೀಡುವ ಮೂಲಕ ಅಲಿ ಸಂವಾದ ಕೊನೆಗೊಳಿಸಿದರು. ಇದು ರೊಮ್ಯಾಂಟಿಕ್ ಚಿತ್ರವೇ ಎಂಬ ಪ್ರಶ್ನೆಗೆ ಅಲ್ಲ ಎಂದು ಉತ್ತರಿಸಿದರೆ,ಚಿತ್ರಕ್ಕೆ ಸ್ಫೂರ್ತಿ ಏನು ಎಂದು ಕೇಳಿದಾಗ, ಮಹಿಳೆ ಎಂದು ಥಟಕ್ಕನೆ ಉತ್ತರಿಸಿದರು.

ಕೃಪೆ:indiatoday.intoday.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News