×
Ad

ಶಾರುಖ್-ಆಲಿಯಾರ ಡಿಯರ್ ಝಿಂದಗಿ ಬಗ್ಗೆ ಏನು ಹೇಳುತ್ತಾರೆ ಬಾಲಿವುಡ್ ಸೆಲೆಬ್ರಿಟಿಗಳು ?

Update: 2016-11-24 14:56 IST

ಮುಂಬೈ, ನ.24: ಶಾರುಖ್ ಖಾನ್ ಹಾಗೂ ಆಲಿಯಾ ಭಟ್  ಅಭಿನಯದ ಡಿಯರ್ ಝಿಂದಗಿ ಸಿನಿಮಾ ಸಾಕಷ್ಟು ಕುತೂಹಲ ಕೆರಳಿಸಿದೆ. ನವೆಂಬರ್ 25 ರಂದು ಈ ಚಿತ್ರ ಅಧಿಕೃತವಾಗಿ ತೆರೆ ಕಾಣಲಿದೆ. ಬುಧವಾರ ಸಂಜೆ ಬಾಲಿವುಡ್ ಸೆಲೆಬ್ರಿಟಿಗಳಿಗಾಗಿಯೆಂದೇ ಈ ಚಿತ್ರದ ವಿಶೇಷ ಪ್ರದರ್ಶನವನ್ನು ಯಶ್ ರಾಜ್ ಸ್ಟುಡಿಯೋದಲ್ಲಿ ಆಯೋಜಿಸಲಾಗಿತ್ತು.

ಈ ವಿಶೇಷ ಪ್ರದರ್ಶನಕ್ಕೆ ಆಗಮಿಸಿದ ಸೆಲೆಬ್ರಿಟಿಗಳು ಚಿತ್ರ ನೋಡಿ ಅದೆಷ್ಟು ಖುಷಿ ಪಟ್ಟರೆಂದರೆ ಅವರಿಗೆ ಅದನ್ನು ಬಾಯ್ತುಂಬಾ ಹೊಗಳದೇ ಇರಲು ಸಾಧ್ಯವಾಗಿಲ್ಲ.  ಅದರ ಪರಿಣಾಮ ಗುರುವಾರ ಟ್ವಿಟ್ಟರಿನಲ್ಲಿ ಡಿಯರ್ ಝಿಂದಗಿ ಗೆ ಪ್ರಶಂಸೆಯ ಸುರಿಮಳೆಯೇ ಹರಿದು ಬಂದಿತ್ತು.

ಚಿತ್ರ ವೀಕ್ಷಿಸಿದ ಪ್ರಮುಖರಲ್ಲಿ  ನಟರಾದ ಸುಶಾಂತ್ ಸಿಂಗ್ ರಾಜಪುತ್, ಚಿತ್ರದ ನಾಯಕಿ ಆಲಿಯಾ ಭಟ್,  ನಿರ್ದೇಶಕರುಗಳಾದ ಝೋಯಾ ಅಖ್ತರ್ ಹಾಗೂ ಇಮ್ತಿಯಾಝ್ ಅಲಿ, ಶ್ರೀದೇವಿ ಮತ್ತಾಕೆಯ ಪುತ್ರಿ ಜಾಹ್ನವಿ ಕಪೂರ್ ಹಾಗೂ ಪತಿ ಬೋನಿ ಕಪೂರ್  ಸೇರಿದ್ದರು.

ಅವರೆಲ್ಲರೂ ಚಿತ್ರದ ಬಗ್ಗೆ ಏನು ಹೇಳಿದ್ದಾರೆಂಬುದನ್ನು ಇಲ್ಲಿ ಓದಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News