ಚೀನಾ: ನಿರ್ಮಾಣ ಹಂತದ ಕಟ್ಟಡ ಕುಸಿದು 40 ಸಾವು

Update: 2016-11-24 16:27 GMT

ಬೀಜಿಂಗ್, ನ. 24: ಪೂರ್ವ ಚೀನಾದ ಜಿಯಾಂಗ್‌ಕ್ಸಿ ಪ್ರಾಂತದಲ್ಲಿ ವಿದ್ಯುತ್ ಸ್ಥಾವರವೊಂದರ ಶೀತಲೀಕರಣ ಗೋಪುರದ ನಿರ್ಮಾಣ ಹಂತದಲ್ಲಿದ್ದ ವೇದಿಕೆಯೊಂದು ಗುರುವಾರ ಕುಸಿದಾಗ ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ ಎಂದು ಸರಕಾರಿ ಸುದ್ದಿಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

ರಾಜ್ಯದ ಫೆಂಗ್‌ಚೆಂಗ್ ಪ್ರದೇಶದಲ್ಲಿ ಬೆಳಗ್ಗೆ 7 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News