×
Ad

ಉಪ್ಪು ಆರೋಗ್ಯಕರವಾಗಿದೆ: ಖಾದರ್

Update: 2016-11-24 23:02 IST

ಮಂಗಳೂರು, ನ. 24: ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೂ ಒಂದೇ ರೀತಿಯ ಉಪ್ಪು ಪೂರೈಕೆಯಾಗುತ್ತಿದ್ದು, ಆರೋಗ್ಯಕರವಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯುಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.

ಸಾಗರ ಶಾಂತಿ ನಗರದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಖರೀದಿಸಿದ್ದ ಉಪ್ಪು ಆಹಾರ ಪದಾರ್ಥಗಳಿಗೆ ಮಿಶ್ರಣ ಮಾಡಿದಾಗ ನೀಲಿ ಬಣ್ಣಕ್ಕೆ ತಿರುಗಿದ್ದುದರಿಂದ ಅಲ್ಲಿನ ಜನರು ಭೀತಿಗೊಳಗಾಗಿರುವ ಬಗ್ಗೆ ಸಚಿವರ ಗಮನ ಸೆಳೆದಾಗ ಉಪ್ಪಿನಲ್ಲಿ ಯಾವುದೇ ರಾಸಾಯನಿಕ ಅಂಶ ಮಿಶ್ರಣವಾಗಿಲ್ಲ ಎಂದಿದ್ದಾರೆ.

ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೂ ಒಂದೇ ವಿಧದ ಉಪ್ಪು ಪೂರೈಕೆಯಾಗಿದೆ. ರಾಜ್ಯದ ಯಾವ ನ್ಯಾಯಬೆಲೆ ಅಂಗಡಿಯಿಂದಲೂ ಇಂತಹ ದೂರು ಕೇಳಿಬಂದಿಲ್ಲ. ಆದ್ದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಲಭ್ಯವಿರುವ ಉಪ್ಪು ಆರೋಗ್ಯಪೂರ್ಣವಾಗಿದ್ದು, ದೇಹಕ್ಕೆ ಹಾನಿಕರವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News