ಲೋಕಸಭೆ: ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿಯಲು ಓರ್ವನ ಯತ್ನ
Update: 2016-11-25 12:22 IST
ಹೊಸದಿಲ್ಲಿ, ನ.25: ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಓರ್ವನು ಜಿಗಿಯಲು ಯತ್ನ ನಡೆಸಿದ ಘಟನೆ ಇಂದು ಅಧಿವೇಶನದ ವೇಳೆ ನಡೆದಿದೆ.
ರಾಕೇಶ್ ಸಿಂಗ್ ಬಗೇಲ್ ಲೋಕಸಭೆಯ ಗ್ಯಾಲರಿಯಿಂದ ಜಿಗಿಯಲು ಯತ್ನ ನಡೆಸಿದನೆಂದು ತಿಳಿದು ಬಂದಿದೆ.
ರಾಕೇಶ್ ಸಿಂಗ್ ಎಂಬವರನ್ನು ಭದ್ರತಾ ಪಡೆಯ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್ ಭದ್ರತಾ ಪಡೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ರಾಕೇಶ್ ಸಿಂಗ್ ಬಗೇಲ್ ಕೂಗಾಡಿ ಲೋಕಸಭೆಯ ಗ್ಯಾಲರಿಯಿಂದ ಜಿಗಿಯಲು ಯತ್ನ ನಡೆಸುತ್ತಿದ್ದಂತೆ ಭದ್ರತಾ ಸಿಬಂದಿಗಳು ಆತನನ್ನು ವಶಕ್ಕೆ ತೆಗೆದುಕೊಂಡರು. ಈತನ ಗ್ಯಾಲರಿಯಿಂದ ಜಿಗಿಯಲು ಕಾರಣವೇನೆಂದು ತಿಳಿದು ಬಂದಿಲ್ಲ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.