ನೋಟು ಅಮಾನ್ಯದಿಂದಾಗಿ ಸಹಕಾರಿ ಕ್ಷೇತ್ರದಲ್ಲಿ ಸಮಸ್ಯೆ: ಕೇರಳಕ್ಕೆ ರಿಯಾಯಿತಿ - ಜೇಟ್ಲಿ
Update: 2016-11-25 12:31 IST
ಹೊಸದಿಲ್ಲಿ,ನ. 25: ನೋಟು ಅಮಾನ್ಯಗೊಳಿಸಿದ್ದರಿಂದ ಕೇರಳದ ಸಹಕಾರಿ ಕ್ಷೇತ್ರದಲ್ಲಿ ಸೃಷ್ಟಿಯಾಗಿರುವ ಸಮಸ್ಯೆಯನ್ನು ಎದುರಿಸಲು ಕೇರಳಕ್ಕೆ ಕೇಂದ್ರಸರಕಾರ ರಿಯಾಯತಿ ಒದಗಿಸಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆಂದು ವರದಿಯಾಗಿದೆ.
ಕೇರಳದ ಸಹಕಾರಿ ಬ್ಯಾಂಕ್‌ಗಳಿಗೆ ರಿಯಾಯಿತಿ ನೀಡುವುದಕ್ಕೆ ಸಂಬಂಧಿಸಿ ನಬಾರ್ಡ್ ಚೇರ್‌ಮೆನ್‌ರೊಂದಿಗೆ ತಾನು ಬುಧವಾರ ಬೆಳಗ್ಗೆ ವಿಶೇಷ ಚರ್ಚೆ ನಡೆಸಿದ್ದೇನೆಂದು ಅವರು ತಿಳಿಸಿದ್ದಾರೆ.
ನೋಟು ಅಮಾನ್ಯದಿಂದ ಕೇರಳದ ಸಹಕಾರಿ ಕ್ಷೇತ್ರದಲ್ಲಿ ಸೃಷ್ಟಿಯಾದ ಸಮಸ್ಯೆಗಳ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತನಗೆ ವಿವರಿಸಿದ್ದಾರೆ. ಆದ್ದರಿಂದಲೇ ಈ ಕುರಿತು ನಬಾರ್ಡ್‌ನೊಂದಿಗೆ ಮಾತುಕತೆ ನಡೆಸಿರುವೆ. ಪಿಣರಾಯಿ ವಿಜಯನ್ ನೀಡಿದ ಸಲಹೆಗಳು ಸರಕಾರದ ಪರಿಶೀಲನೆಯಲ್ಲಿದೆ ಎಂದು ಜೇಟ್ಲಿ ತಿಳಿಸಿದ್ದಾರೆಂದು ವರದಿ ತಿಳಿಸಿದೆ.