ಬ್ಯಾರೀಸ್ ಪದವಿ ಕಾಲೇಜಿನ ಪ್ರಾಂಶುಪಾಲ ಶಮೀರ್‌ಗೆ ಡಾಕ್ಟರೇಟ್

Update: 2016-11-25 09:44 GMT

ಕೋಡಿ, ನ.25: ಇಲ್ಲಿನ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶಮೀರ್ ಅವರು ಮಂಡಿಸಿದ “ADJUSTMENT PROBLEM OF I.T. PROFESSIONAL IN RELATION TO THEIR OCCUPATIONAL STRESS ORGANISATION CLIMATE AND FAMILY ENVIRONMENT” ಎಂಬ ಮಹಾಪ್ರಬಂಧಕ್ಕೆ ಅಣ್ಣಾಮಲೆ ವಿಶ್ವವಿದ್ಯಾನಿಲಯ ಪಿ.ಎಚ್.ಡಿ. ಪ್ರದಾನ ಮಾಡಿದೆ.
ಉಜಿರೆ ನಿವಾಸಿಯ ದಿ.ಇಬ್ರಾಹೀಂ ಹಾಗೂ ಅವ್ವಮ್ಮ ದಂಪತಿಯ ಪುತ್ರರಾಗಿರುವ ಡಾ.ಶಮೀರ್‌ರವರು ಪ್ರೊ.ಡಾ.ಇ.ಜೋಸೆಫ್ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಸಿದ್ಧಪಡಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News