×
Ad

ರಾಜಧಾನಿ ಜ್ಯುವೆಲ್ಲರ್ಸ್‌ ಶೂಟೌಟ್ ಪ್ರಕರಣ: ಐದನೆ ಆರೋಪಿಯ ಸೆರೆ

Update: 2016-11-25 15:24 IST

ಪುತ್ತೂರು, ನ.25: ಇಲ್ಲಿನ ರಾಜಧಾನಿ ಜ್ಯುವೆಲ್ಲರ್ಸ್‌ ಶೂಟೌಟ್ ಪ್ರಕರಣದ ಐದನೆ ಆರೋಪಿ ರಮೀಝ್ ರಾಜ್(23) ಎಂಬಾತನನ್ನು ಬಂಧಿಸುವಲ್ಲಿ ಪುತ್ತೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನೋರ್ವ ಆರೋಪಿ ಫಯಾಝ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಪುತ್ತೂರು ಮುಖ್ಯರಸ್ತೆಯ ರಾಜಧಾನಿ ಜ್ಯುವೆಲ್ಲರ್ಸ್‌ ಮೇಲೆ ನಡೆಸಿದ್ದ ಗುಂಡಿನ ದಾಳಿಯಲ್ಲಿ ಆರು ಮಂದಿ ಆರೋಪಿಗಳು ಭಾಗಿಯಾಗಿದ್ದರು. ದುಬೈನಲ್ಲಿ ಸೇಲ್ಸ್‌ಮ್ಯಾನ್ ಆಗಿದ್ದ ಕುಂಬ್ಳೆ ನಿವಾಸಿ ರಮೀಝ್‌ರಾಜ್ ಬುಧವಾರ ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಆಸೀರ್, ಅಲಿ ಅಲಿಯಾಸ್ ಮುನ್ನಾ, ಅನ್ವರ್ ಹಾಗೂ ಕಾಲಿಯಾ ರಫೀಕ್ ಎಂಬಾತನನ್ನು ಪುತ್ತೂರು ನಗರ ಠಾಣೆಯ ಪೊಲೀಸರು ಬಂಧಿಸಿದ್ದರು.

ಆರೋಪಿಯನ್ನು ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಶೂಟೌಟ್ ಸಂದರ್ಭ ರಮೀಝ್‌ರಾಜ್ ಬೈಕ್ ಚಲಾಯಿಸುತ್ತಿದ್ದ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News