ಕುಲ್ಗಾಂನಲ್ಲಿ ಉಗ್ರರ ಅಟ್ಟಹಾಸ; ಇಬ್ಬರು ಪೊಲೀಸರು ಬಲಿ
Update: 2016-11-25 15:26 IST
ಶ್ರೀನಗರ, ನ.25: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ನಲ್ಲಿ ಉಗ್ರರ ಅಟ್ಟಹಾಸಕ್ಕೆ ಇಬ್ಬರು ಪೊಲೀಸರು ಇಂದು ಬಲಿಯಾಗಿದ್ದಾರೆ.
ಕುಲ್ಗಾಮ್ ನಲ್ಲಿ ಪೊಲೀಸರ ವಾಹನದ ಮೇಲೆ ಉಗ್ರರು ಗುಂಡು ಹಾರಿಸಿದ ಪರಿಣಾಮವಾಗಿ ಇಬ್ಬರು ಪೊಲೀಸರು ಹುತಾತ್ಮರಾದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಬಂಡೀಪುರದಲ್ಲಿ ಸಿಆರ್'ಪಿಎಫ್ 45 ಬೆಟಾಲಿಯನ್ ಜೊತೆಗೆ 13 ರಾಷ್ಟ್ರೀಯ ರೈಫಲ್ಸ್ ಮತ್ತು ರಾಜ್ಯ ಪೊಲೀಸರ ತಂಡ ಉಗ್ರರ ವಿರುದ್ಧ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿತ್ತು. ಈ ವೇಳೆ ಸೇನೆ ನಡೆಸಿದ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರನ್ನು ಕೊಲ್ಲಲಾಗಿತ್ತು. ಇದರ ಬೆನ್ನಿಗೆ ಉಗ್ರರು ಕುಲ್ಗಾಮ್ ನಲ್ಲಿ ಪೊಲೀಸ್ ವಾಹನದ ಮೇಲೆ ದಾಳಿ ನಡೆಸಿದ್ದಾರೆ.