ತೂಮಿನಾಡು: ಡಿ.1-4ರವರೆಗೆ ಮತ ಪ್ರವಚನ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ

Update: 2016-11-25 10:13 GMT

ಕುಂಜತ್ತೂರು, ನ.25: ತೂಮಿನಾಡು ಸಿರಾಜುಲ್ ಇಸ್ಲಾಮ್ ಮದ್ರಸ ಕಮಿಟಿ ಹಾಗೂ ಅಲ್ ಫತಾಹ್ ಜುಮಾ ಮಸೀದಿಯ ಜಂಟಿ ಆಶ್ರಯದಲ್ಲಿ 3 ದಿನಗಳ ಧಾರ್ಮಿಕ ಪ್ರವಚನ ಹಾಗೂ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವು ಡಿ.1ರಿಂದ 4ರವರೆಗೆ ನಡೆಯಲಿದೆ.

ಡಿ.1ರಂದು ತೂಮಿನಾಡು ಅಲ್ ಫತಾಹ್ ಜುಮಾ ಮಸೀದಿ ವಠಾರದಲ್ಲಿ ಸಂಜೆ 7 ಗಂಟೆಗೆ ಅಬ್ದುಲ್ ಖಾದರ್ ಮುಸ್ಲಿಯಾರ್ ಕುಕ್ಕಾಜೆ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಉದ್ಯಾವರ ಸಾವಿರ ಜಮಾಅತ್ ಮಸೀದಿ ಅಧ್ಯಕ್ಷ ಅತಾವುಲ್ಲ ತಂಙಳ್ ಉದ್ಘಾಟಿಸುವರು. ಮುದುಗುಡ ಅಬ್ದುಲ್ ಖಾದರ್ ಸಖಾಫಿ ಕಾಸರಗೋಡು ಪ್ರವಚನ ನೀಡಲಿದ್ದಾರೆ. ಬಳಿಕ 2 ದಿನಗಳಲ್ಲಿ ಧಾರ್ಮಿಕ ಪ್ರವಚನಗಳು ನಡೆಯಲಿವೆ.
 ರವಿವಾರ ಅಪರಾಹ್ನ 2 ಗಂಟೆಗೆ ಮಹ್ಮೂದ್ ಟಿ.ಎಂ. ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಅಲ್ ಫತಾಹ್ ಜುಮಾ ಮಸೀದಿ ಖತೀಬ್ ಮುಹಮ್ಮದ್ ಶರೀಫ್ ಹನೀಫಿ ಉದ್ಘಾಟಿಸುವರು. ಬಳಿಕ ಮದ್ರಸದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News