×
Ad

ಖ್ಯಾತ ಪತ್ರಕರ್ತ ದಿಲೀಪ ಪಡಗಾಂವಕರ್ ನಿಧನ

Update: 2016-11-25 16:15 IST

ಪುಣೆ,ನ.25: ಜಮ್ಮು-ಕಾಶ್ಮೀರ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ರಚಿಸಲಾಗಿದ್ದ ಸಂಧಾನಕಾರರ ಗುಂಪಿನ ಸದಸ್ಯರಾಗಿದ್ದ ಖ್ಯಾತ ಪತ್ರಕರ್ತ ದಿಲೀಪ ಪಡಗಾಂವಕರ್(72) ಅವರು ಶುಕ್ರವಾರ ಇಲ್ಲಿಯ ಆಸ್ಪತ್ರೆಯೊಂದರಲ್ಲಿ ನಿಧನರಾದರು. ದಿ ಟೈಮ್ಸ್ ಆಫ್ ಇಂಡಿಯಾದ ಮಾಜಿ ಸಂಪಾದಕರಾದ ಅವರು ಕಳೆದ ಹಲವಾರು ವಾರಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.

ತನ್ನ ಎಳೆಯ ವಯಸ್ಸಿನಲ್ಲಿಯೇ ಪತ್ರಿಕೋದ್ಯಮ ರಂಗವನ್ನು ಪ್ರವೇಶಿಸಿದ್ದ ಪಡಗಾಂವಕರ್ 1968ರಲ್ಲಿ ಮಾನವೀಯ ಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದ ನಂತರ ಪ್ಯಾರಿಸ್ ವರದಿಗಾರರಾಗಿ ಟೈಮ್ಸ್ ಸೇರಿದ್ದರು. 1988ರಲ್ಲಿ ಸಂಪಾದಕರಾಗಿ ನೇಮಕಗೊಳ್ಳುವ ಮುನ್ನ ವಿವಿಧ ಹುದ್ದೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು. ಸಂಪಾದಕರಾಗಿ ಆರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು.

 1978-1986ರ ಅವಧಿಯಲ್ಲಿ ಬ್ಯಾಂಕಾಕ್ ಮತ್ತು ಪ್ಯಾರಿಸ್‌ಗಳಲ್ಲಿ ಯುನೆಸ್ಕೋ ದೊಂದಿಗೂ ಅವರು ಕೆಲಸ ಮಾಡಿದ್ದರು.

2008ರಲ್ಲಿ ಕಾಶ್ಮೀರ ಕಣಿವೆಯಲ್ಲಿ ನಿರಂತರ ಅಶಾಂತಿ ತಲೆದೋರಿದ್ದ ಸಂದರ್ಭ ಆಗಿನ ಸರಕಾರವು ರಚಿಸಿದ್ದ ಮೂವರು ಸದಸ್ಯರ ಸಂಧಾನಕಾರರ ಗುಂಪಿನಲ್ಲಿ ಪಡಗಾಂವಕರ್ ಓರ್ವರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News