ಚೀನಾಕ್ಕೆ ಕ್ಯಾಂಪ್ಕೋದಿಂದ ಪ್ರಥಮ ಹಂತದ ಅಡಿಕೆ ರಫ್ತು

Update: 2016-11-25 10:54 GMT

ಪುತ್ತೂರು, ನ.25: ವೌತ್ ಫ್ರೆಶ್ನರ್‌ಗಾಗಿ ಚೀನಾದ ‘ಕಿಂಗ್ ಆಫ್ ಟೇಸ್ಟ್’ ಕಂಪೆನಿಗೆ ಕ್ಯಾಂಪ್ಕೊ ಸಂಸ್ಥೆಯ ವತಿಯಿಂದ ಪ್ರಾಯೋಗಿಕವಾಗಿ ಪ್ರಥಮ ಹಂತದ ಅಡಿಕೆ ರಫ್ತು ಪುತ್ತೂರಿನಿಂದ ಗುರುವಾರದಿಂದ ಆರಂಭಗೊಂಡಿದೆ.

ಚೀನಾದಲ್ಲಿ ಅಡಿಕೆಯ ಮೌತ್ ಫ್ರೆಶ್ನರ್‌ನ್ನು ಬಹಳ ಜನಪ್ರಿಯವಾಗಿ ಅಭಿವೃದ್ಧಿಪಡಿಸಿದ ‘ಕಿಂಗ್ ಆಫ್ ಟೇಸ್ಟ್’ ಈ ಹಿಂದೆ ಮಾಡಿಕೊಂಡ ನಿರ್ಣಯದಂತೆ ಈ ರಫ್ತು ಆರಂಭಿಸಲಾಗಿದೆ.

ಶಿವಮೊಗ್ಗ, ಪುತ್ತೂರು ಹಾಗೂ ಕೊಯಂಬತ್ತೂರು ಪ್ರದೇಶದ ಆಯ್ದ ಅಡಿಕೆಯನ್ನು ಪುತ್ತೂರಿನಲ್ಲಿ ಸಂಸ್ಕರಣಗೊಳಿಸಿದ್ದು, ಭಾರತ ಸರಕಾರದ ಅಧೀನದಲ್ಲಿರುವ ಕೃಷಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಧೃಡೀಕರಣಗೊಂಡ ಈ ಉತ್ಪನ್ನಗಳನ್ನು ಚೆನ್ನೈ ಬಂದರಿನ ಮೂಲಕ ಚೀನಾ ದೇಶದ ‘ಕಿಂಗ್ ಆಫ್ ಟೇಸ್ಟ್’ ಕಂಪೆನಿಗೆ ರಪ್ತು ಮಾಡಲಾಯಿತು. ಇದೊಂದು ಮಹತ್ತರ ಬೆಳವಣಿಗೆಯಾಗಿದ್ದು, ಮುಂದಿನ ದಿನಗಳಲ್ಲಿ ಚೀನಾದ ಬೇಡಿಕೆಯನ್ನು ಪರಿಗಣಿಸಿ ರಪ್ತು ವ್ಯವಹಾರವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಕ್ಯಾಂಪ್ಕೋ ಸಂಸ್ಥೆಯು ತೀರ್ಮಾನಿಸಿದೆ.

ಅಡಿಕೆಯನ್ನು ರಪ್ತು ಮಾಡುವ ಸಂದರ್ಭದಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಎಂ. ಉಪಸ್ಥಿತರಿದ್ದು ಶುಭ ಹಾರೈಸಿದರು.

ಅಡಿಕೆ ವಿಭಾಗದ ಸಹಾಯಕ ಮಹಾಪ್ರಬಂಧಕ ಕೆ.ಎಂ.ಲೋಕೇಶ್, ಪುತ್ತೂರು ವಿಭಾಗದ ಹಿರಿಯ ವ್ಯವಸ್ಥಾಪಕ ಶ್ರೀಧರ ಶೆಟ್ಟಿ ಹಾಗೂ ಚೈನಾ ರಪ್ತು ವ್ಯಾಪಾರದ ಸಂಯೋಜಕ ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News