ಟಾಟಾ ಸ್ಟೀಲ್ ಅಧ್ಯಕ್ಷತೆಯಿಂದ ಸೈರಸ್ ಮಿಸ್ತ್ರಿ ವಜಾ

Update: 2016-11-25 14:38 GMT

ಹೊಸದಿಲ್ಲಿ, ನ.25: ಟಾಟಾ ಸ್ಟೀಲ್‌ನ ಅಧ್ಯಕ್ಷ ಹುದ್ದೆಯಿಂದ ಸೈರಸ್ ಮಿಸ್ತ್ರಿಯವರನ್ನು ವಜಾಗೊಳಿಸಲಾಗಿದ್ದು, ಸ್ವತಂತ್ರ ನಿರ್ದೇಶಕ ಒ.ಪಿ.ಭಟ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಅಲ್ಲದೆ ಸಂಸ್ಥೆಯ ನಿರ್ದೇಶಕ ಸ್ಥಾನದಿಂದ ನುಸ್ಲಿ ಎನ್. ವಾಡಿಯಾ ಅವರನ್ನು ವಜಾಗೊಳಿಸುವ ಉದ್ದೇಶದಿಂದ ಡಿಸೆಂಬರ್ 21ರಂದು ಕಂಪೆನಿಯ ವಿಶೇಷ ಮಹಾಸಭೆ ಕರೆಯಲಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
   ಕಳೆದ ತಿಂಗಳು ನಡೆದ ಅನಿರೀಕ್ಷಿತ ಮತ್ತು ನಾಟಕೀಯ ಬೆಳವಣಿಗೆಯಲ್ಲಿ ಟಾಟಾ ಸನ್ಸ್ ಸಂಸ್ಥೆಯ ಅಧ್ಯಕ್ಷತೆಯಿಂದ ಸೈರಸ್ ಮಿಸ್ತ್ರಿಯನ್ನು ವಜಾಗೊಳಿಸಿ ರತನ್ ಟಾಟಾರವನ್ನು ತಾತ್ಕಾಲಿಕ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಇದಾದ ಬಳಿಕ ಸೈರಸ್ ಮಿಸ್ತ್ರಿಯನ್ನು ಟಾಟಾ ಸಮೂಹ ಸಂಸ್ಥೆಯ ವಿವಿಧ ಸಹಸಂಸ್ಥೆಗಳ ಅಧ್ಯಕ್ಷ ಸ್ಥಾನದಿಂದ ಹೊರಗಿಡುವ ಬಗ್ಗೆ ‘ಟಾಟಾ ಸನ್ಸ್’ನ ರತನ್ ಟಾಟಾ ನೇತೃತ್ವದ ಮಧ್ಯಂತರ ಆಡಳಿತ ಮಂಡಳಿ ನಿರ್ಧರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News