ಕೊಲಂಬಿಯ: ಬಂಡುಕೋರರ ಜೊತೆಗಿನ ಶಾಂತಿ ಒಪ್ಪಂದಕ್ಕೆ ಸಹಿ

Update: 2016-11-25 15:47 GMT

ಬೊಗೊಟ, ನ. 25: ಕೊಲಂಬಿಯದ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟಸ್ ದೇಶದ ಅತಿ ದೊಡ್ಡ ಬಂಡುಕೋರ ಗುಂಪಿನೊಂದಿಗೆ ಗುರುವಾರ ಪರಿಷ್ಕೃತ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಅರ್ಧ ಶತಮಾನ ಹಳೆಯ ಸಂಘರ್ಷಕ್ಕೆ ಕೊನೆಹಾಡಲು ಎರಡು ತಿಂಗಳುಗಳ ಅವಧಿಯಲ್ಲಿ ನಡೆದ ಎರಡನೆ ಪ್ರಯತ್ನ ಇದಾಗಿದೆ.

ಸ್ಯಾಂಟಸ್ ಮತ್ತು ರೆವಲೂಶನರಿ ಆರ್ಮ್‌ಡ್ ಫೋರ್ಸಸ್ ಆಫ್ ಕೊಲಂಬಿಯದ ನಾಯಕ ರಾಡ್ರಿಗೊ ಲೊಂಡೊನೊ ಬೊಗೊಟದ ಐತಿಹಾಸಿಕ ಕೊಲನ್ ತಿಯೇಟರ್‌ನಲ್ಲಿ 310 ಪುಟಗಳ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು.

ಸುಮಾರು ಎರಡು ತಿಂಗಳ ಹಿಂದಿನ ಪ್ರಥಮ ಶಾಂತಿ ಒಪ್ಪಂದವನ್ನು ಜನಮತಗಣನೆಯಲ್ಲಿ ಜನರು ತಿರಸ್ಕರಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News