ಭಾರತದ ಕಪ್ಪು ಹಣ ಭೂತಾನ್ ಪ್ರವೇಶಿಸುವ ಭೀತಿ

Update: 2016-11-25 16:52 GMT

ತಿಂಪು, ನ. 25: ಭಾರತದಲ್ಲಿ ರೂ. 500 ಮತ್ತು ರೂ. 1000 ಕರೆನ್ಸಿ ನೋಟುಗಳ ರದ್ದತಿಯ ಬಳಿಕ, ಭಾರತೀಯ ಕಪ್ಪುಹಣ ಭೂತಾನ್ ಪ್ರವೇಶಿಸುವ ಭೀತಿ ತಲೆದೋರಿದೆ ಹಾಗೂ ಆ ದೇಶದ ರಫ್ತು ಮಾರುಕಟ್ಟೆಯ ಮೇಲೆ ಅದು ಪ್ರಭಾವ ಬೀರುವ ಕಳವಳ ವ್ಯಕ್ತವಾಗಿದೆ.

ಭಾರತ-ತಿಂಪು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವಾಣಿಜ್ಯ ಕೇಂದ್ರ ಫುಯೆಂಟ್‌ಶಾಲಿಂಗ್‌ನಲ್ಲಿ ನಡೆಸಲಾದ ಆಕಸ್ಮಿಕ ವಾಹನ ತಪಾಸಣೆಯ ವೇಳೆ ಟ್ಯಾಕ್ಸಿಯೊಂದರಲ್ಲಿ 1,000 ರೂ. ಮುಖಬೆಲೆಯ 7 ಲಕ್ಷ ರೂ. ವೌಲ್ಯದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚೀನಾದ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

ಟ್ಯಾಕ್ಸಿಯು ಫುಯೆಂಟ್‌ಶಾಲಿಂಗ್‌ನಿಂದ ತಿಂಪುಗೆ ಹೋಗುತ್ತಿತ್ತು ಎಂದು ವಾರ್ತಾ ಸಂಸ್ಥೆ ವರದಿ ಮಾಡಿದೆ.

ಭಾರತ ಭೂತಾನ್‌ನ ಅತಿ ದೊಡ್ಡ ರಫ್ತು ಮತ್ತು ಆಮದು ಮಾರುಕಟ್ಟೆಯಾಗಿರುವುದರಿಂದ, ಕರೆನ್ಸಿ ರದ್ದತಿಯು ಆಲೂಗಡ್ಡೆ ಮತ್ತು ಕಿತ್ತಳೆಗಳಂಥ ಭೂತಾನ್‌ನ ವಾಣಿಜ್ಯ ಬೆಳೆಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News