×
Ad

ಸುರತ್ಕಲ್: ನಾಳೆ ‘ಹರ್ಷ’ 13ನೆ ಮಳಿಗೆ ಶುಭಾರಂಭ

Update: 2016-11-25 23:57 IST

ಮಂಗಳೂರು, ನ.25: ರಾಜ್ಯಾದ್ಯಂತ 12 ಮಳಿಗೆಗಳೊಂದಿಗೆ ವಿಸ್ತೃತಗೊಂಡಿರುವ ಪ್ರಕಾಶ್ ರಿಟೇಲ್ ಪ್ರೈ.ಲಿ. ಒಡೆತನದ ‘ಹರ್ಷ’ ಗೃಹೋಪಕರಣಗಳ ಮಳಿಗೆಯು ವೈವಿಧ್ಯಮಯ ಉತ್ಪನ್ನಗಳ ವಿಶಾಲ ಶ್ರೇಣಿಯೊಂದಿಗೆ ನ.27ರಂದು ಸುರತ್ಕಲ್‌ನಲ್ಲಿ ಶುಭಾರಂಭಗೊಳ್ಳಲಿದೆ.

 ಸುರತ್ಕಲ್ ಹೆದ್ದಾರಿಯ ಆರ್.ಇ.ಬಿ. ಕಾಂಪ್ಲೆಕ್ಸ್‌ನಲ್ಲಿ ಆರಂಭಿಸಲಾಗಿರುವ ‘ಹರ್ಷ’ದ 13ನೆ ಮಳಿಗೆಯನ್ನು ನ.27ರಂದು ಬೆಳಗ್ಗೆ 10.30ಕ್ಕೆ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಉದ್ಘಾಟಿಸಲಿದ್ದು, ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಮೊಯ್ದಿನ್ ಬಾವ, ಮನಪಾ ಸದಸ್ಯ ಅಶೋಕ್ ಶೆಟ್ಟಿ, ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ಫೀಲ್ಡ್ ಜನರಲ್ ಮ್ಯಾನೇಜರ್ ಸತೀಶ್ ಕಾಮತ್, ಆರ್.ಇ.ಬಿ. ಪ್ರೈ.ಲಿ.ನ ಆಡಳಿತ ನಿರ್ದೇಶಕ ಅಶೋಕ್ ರೈ ಉಪಸ್ಥಿತರಿರುವರು.

ಕರ್ನಾಟಕದ ಪ್ರಸಿದ್ಧ ಗೃಹೋಪಕರಣಗಳ ಮಳಿಗೆಯಾಗಿ ಗುರುತಿಸಿಕೊಂಡಿರುವ ‘ಹರ್ಷ’ ಉಡುಪಿಯಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಮೊದಲ ಮಳಿಗೆಯನ್ನು 1987ರ ಮಾರ್ಚ್ 9ರಂದು ಆರಂಭಿಸಿದೆ. ನಂತರದ ವರ್ಷಗಳಲ್ಲಿ ಮಂಗಳೂರು, ಪುತ್ತೂರು, ಕುಂದಾಪುರ, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಹಾಗೂ ರಾಜ್ಯದ ರಾಜಧಾನಿ ಬೆಂಗಳೂರಿಗೂ ತನ್ನ ಮಳಿಗೆಗಳನ್ನು ವಿಸ್ತರಿಸಿರುವ ಹರ್ಷ ಇದೀಗ 13ನೆ ಮಳಿಗೆಯನ್ನು ಸುರತ್ಕಲ್‌ನಲ್ಲಿ ತೆರೆಯಲಿದೆ.

ಹರ್ಷದ ಎಲ್ಲ ಮಳಿಗೆಗಳಲ್ಲಿ ವರ್ಷಂಪ್ರತಿ ನಡೆಯುವ ವಿಶೇಷ ಮಾರಾಟೋತ್ಸವಗಳಾದ ಹರ್ಷೋತ್ಸವ, ಮಾನ್ಸೂನ್ ಮ್ಯಾಜಿಕ್, ಹ್ಯಾಪಿ ಟೈಮ್ಸ್, ದೀಪಾವಳಿ ಬಝಾರ್ ಸಂದರ್ಭ ಅತ್ಯಾಧುನಿಕ ಗೃಹೋಪಯೋಗಿ ಉಪಕರಣಗಳ ಪ್ರದರ್ಶನ ಹಾಗೂ ಮಾರಾಟದ ಜೊತೆಗೆ ಆಕಷರ್ಕ ಕೊಡುಗೆಗಳು ಮತ್ತು ವಿಶೇಷ ರಿಯಾಯಿತಿ ನೀಡುತ್ತಿರುವುದು ಎಲ್ಲ ವರ್ಗದ ಗ್ರಾಹಕರಿಗೆ ಹೆಚ್ಚಿನ ಸಂತಸವನ್ನು ನೀಡುತ್ತಿದೆ. ಸುಮಾರು 25,000 ಚದರದಡಿ ಸ್ಥಳಾವಕಾಶವಿರುವ ’ಹರ್ಷ’ದಲ್ಲ್ಲಿ ವಿಶಾಲವಾದ ಪಾರ್ಕಿಂಗ್ ಸೌಲಭ್ಯವಿದೆ. ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ವೈವಿಧ್ಯಮಯ ಉತ್ಪನ್ನಗಳ ವಿಶಾಲ ಶ್ರೇಣಿ ಒಂದೇ ಸೂರಿನಡಿ ಖರೀದಿಸುವ ಸೌಲಭ್ಯ ಎಲ್ಲ ಗ್ರಾಹಕರಿಗೆ ಸಿಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News