×
Ad

ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ

Update: 2016-11-26 23:48 IST

ಮಂಗಳೂರು, ನ.26: ಮೂಲಗೇಣಿ ಕಾಯ್ದೆ ವಿರುದ್ಧ ಮತ್ತು ಕಾಯ್ದೆ ಹಾಗೂ ನಿಯಮಾವಳಿಗೆ ತಡೆಯಾಜ್ಞೆ ನೀಡುವಂತೆ ಅರ್ಜಿ ಸಲ್ಲಿಸಲಾಗಿದೆ. ನ.30ರಂದು ಮುಂದಿನ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೂಲಗೇಣಿ ಕಾಯ್ದೆ ಮತ್ತು ನಿಯಮಾವಳಿ ಅನುಷ್ಠಾನ ಸಂಬಂಧಿಸಿ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಮೂಲಗಾರರು ಮತ್ತು ಭೂಮಾಲಕರ ಸಂಘ ಅಧ್ಯಕ್ಷ ಕ್ಲಾರೆನ್ಸ್ ಪಾಯಸ್ ಸುದ್ದಿಗೋಷ್ಠಿಯಲ್ಲಿಂದು ಒತ್ತಾಯಿಸಿದ್ದಾರೆ.

ಮೂಲಗೇಣಿ ಮತ್ತು ಒಳ ಮೂಲಗೇಣಿದಾರರಿಗೆ ಮಾಲಕತ್ವ ನೀಡುವ ಸಂಬಂಧ ನಿಯಮಾವಳಿ ರೂಪಿಸಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿರುವುದರ ವಿರುದ್ಧ ಮೂಲಗಾರರು ಮತ್ತು ಭೂಮಾಲಕರ ಸಂಘ ವತಿಯಿಂದ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದರು.

ಸಾರ್ವಜನಿಕರು ಮೂಲಗೇಣಿಗೆ ಸಂಬಂಧಿಸಿದ ಭೂಮಿಯ ಬಗ್ಗೆ ಯಾವುದೇ ವ್ಯವಹಾರ ಕುರಿತು ಒಪ್ಪಂದ ಮಾಡಿಕೊಡಿಕೊಳ್ಳಬಾರದು ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಡಿ.ಬಿ.ಮೆಹತಾ, ಗಿಸೆಲ್ ಮೆಹತಾ, ಕೋಟಿಪ್ರಕಾಶ್, ಪ್ರಕಾಶ್ ಆಳ್ವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News