ಡಿ.4ರಂದು ಮುಂಬೈ ಮಹಾಯಾತ್ರೆ
Update: 2016-11-27 00:03 IST
ಮಂಗಳೂರು, ನ.26: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 60ನೆ ಪರಿನಿರ್ವಾಣದ ಅಂಗವಾಗಿ ಡಿ.4ರಂದು ಕರ್ನಾಟಕ ರಿಪಬ್ಲಿಕ್ ಸೇನೆ ಅಂಬೇಡ್ಕರ್ ಪ್ರತಿಷ್ಠಾನ ನಾಲ್ಕನೆ ಮುಂಬೈ ಮಹಾಯಾತ್ರೆ ಹಮ್ಮಿಕೊಂಡಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಷ್ಠಾನದ ಅಧ್ಯಕ್ಷ ಶಿವಪ್ಪ ರೆಂಕದ ಗುತ್ತು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಯಾತ್ರೆಯು ಬೆಂಗಳೂರಿನಿಂದ ಹೊರಲಿದ್ದು, ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರದ ಸದಸ್ಯರು ಭಾಗವಹಿಸಲಿದ್ದಾರೆ. ದ.ಕ.ದಿಂದ 350 ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರಧಾನಿಯವರು 500 ಮತ್ತು 1000 ರೂ. ನೋಟುಗಳನ್ನು ಅಮಾನ್ಯ ಮಾಡಿರುವುದರಿಂದ ಕಾಳಧನಿಕರಿಗೆ ದೊಡ್ಡ ಹೊಡೆತ ಬಿದ್ದಿದೆ. ಜನಸಾಮಾನ್ಯರಿಗೆ ಸಮಸ್ಯೆಯುಂಟಾಗಿದ್ದರೂ ದೇಶದ ಹಿತದೃಷ್ಟಿಯಿಂದ ಇದು ಮಹತ್ವದ ನಿರ್ಧಾರವಾಗಿದೆ ಎಂದವರು ಶ್ಲಾಸಿದರು.
ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ಕೆ.ಸಾಲು ಉಪಸ್ಥಿತರಿದ್ದರು.